ಬೆಂಗಳೂರು : ಕರ್ನಾಟಕವನ್ನು ಡ್ರಗ್ಸ್ ಮುಕ್ತ ಕರ್ನಾಟಕವನ್ನಾಗಿಸುವುದು ನನ್ನ ಉದ್ದೇಶ. ನಮ್ಮ ಯುವಜನರ ಚೈತನ್ಯ ಮತ್ತು ಸಾಮರ್ಥ್ಯಗಳು ಮಾದಕ ವಸ್ತುಗಳಿಂದ ಬಲಿಯಾಗಬಾರದು. ಇದಕ್ಕೆ ಪೊಲೀಸ್ ಇಲಾಖೆ ಸಿಬ್ಬಂದಿ ಕಟಿಬದ್ಧ ನಿಲುವನ್ನು ಕೈಗೊಳ್ಳಬೇಕು. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷ, ಅನೈತಿಕ ಪೊಲೀಸ್ ಗಿರಿ ಹೆಚ್ಚಾಗಿದ್ದು, ಹಿಂದಿದ್ದ ಅಧಿಕಾರಿಗಳು ನಿಯಂತ್ರಣ ಮಾಡಲಿಲ್ಲ. ಇಬ್ಬರು ಅಧಿಕಾರಿಗಳನ್ನು ಬದಲಾಯಿಸಿ ಆದೇಶ ಹೊರಡಿಸಲಾಗಿದೆ. ಈಗ ದಕ್ಷಿಣ ಕನ್ನಡ ಜಿಲ್ಲೆ ನಿಯಂತ್ರಣದಲ್ಲಿದೆ.
ಇದನ್ನು ಸಾಧಿಸಿದ್ದು ನಮ್ಮ ಅಧಿಕಾರಿಗಳು ಮತ್ತ ಸಿಬ್ಬಂದಿ ವರ್ಗದವರು.ನೀವು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. ಸಾಧಿಸಲು ಛಲ ಬೇಕಷ್ಟೆ, ಇದೇ ರೀತಿ ಇಡೀ ರಾಜ್ಯದಲ್ಲಿ ಮಾದಕ ವಸ್ತು ಹಾವಳಿ ತಪ್ಪಿಸಲು ನಿಮ್ಮಿಂದ ಸಾಧ್ಯವಿದೆ. ನೀವು ಮನಸ್ಸು ಮಾಡಿದರೆ ಕರ್ನಾಟಕ ಪೊಲೀಸರ ಘನತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗುತ್ತದೆ. ಕೆಲವು ಪೊಲೀಸರು ರಿಯಲ್ ಎಸ್ಟೇಟ್ ,ಮಾಡುವವರ ಜೊತೆ ಡ್ರಗ್ ಡೀಲರ್ಗಳ ಜೊತೆಯಲ್ಲಿ ಶಾಮೀಲಾಗಿದ್ದಾರೆ.
ರೌಡಿಗಳ ಬೇರುಗಳನ್ನು ಚಿವುಟಿ ಹಾಕಲು ಪೊಲೀಸರಿಗೆ ಮಾತ್ರ ಸಾಧ್ಯವಿದೆ. ಪೊಲೀಸರ ಬಗ್ಗೆ ಅಪರಾಧ ಜಗತ್ತಿಗೆ ಭಯದ ವಾತಾವರಣ ಕಡಿಮೆಯದೆ , ಕರ್ನಾಟಕ ಪೊಲೀಸ್ ಧಯರ್ಯ ಕಳೆದುಕೊಳ್ಳದೆ ತಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಬೇಕು. ಡ್ರಗ್ಸ್ ಮಾರುವವರು, ತರುವವರು, ಅದು ಎಲ್ಲಿಂದ ಹೇಗೆ ಬರುತ್ತದೆ ಅದರ ಮೂಲ ಎಲ್ಲಿದೆ, ಇದರ ಏಜೆಂಟರುಗಳು ಯಾರಾರು ಎಂಬ ಮಾಹಿ ಪೊಲೀಸರಿಗೆ ಗೊತ್ತಿದ್ದರೂ ಕೆಲ ಪೊಲೀಸರು ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಆದಷ್ಟು ಬೇಗ ರಾಜ್ಯವನ್ನು ಡ್ರಗ್ಸ್ ಮುಕ್ತ ಕರ್ನಾಟಕʼವನ್ನಾಗಿ ಮಾಡಬೇಕು. 1956ರಲ್ಲಿ ಜಾರಿಯಾದ ಕ್ಯಾಪ್ ಒಂದೇ ಮಾದರಿಯಲ್ಲಿದೆ. ಇದನ್ನು ನಾನೆ ಸ್ವತಃ ಆಯ್ಕೆ ಮಾಡಿ ಬದಲಾವಣೆ ತಂದಿದ್ದೇನೆ. ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಒಂದೇ ರೀತಿಯ ಕ್ಯಾಪ್ ಒದಗಿಸಿದ್ದು, ಇದರಿಂದ ಏಲ್ಲರೂ ಆತ್ಮವಿಶ್ವಾಸದಿಂದ ಕೆಲಸ ಮಾಡಬಹುದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದಾರೆ.
