ಗದಗ : ಗದಗದ ಲಕ್ಷ್ಮೇಶ್ವರ ಪಟ್ಟಣದಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ರೈತರು ಬೆಳೆದ ಗೋವಿನ ಜೋಳ ಸಂಪೂರ್ಣವಾಗಿ ನೆಲಕಚ್ಚಿದ ಪರಿಣಾಮವಾಗಿ ಬಿದ್ದಲ್ಲೆ ಮೊಳಕೆ ಒಡೆಯುವ ಸ್ಥಿತಿ ನಿರ್ಮಾಣವಾಗಿದೆ.ಈ ಬಾರಿ ಮುಂಗಾರು ಮಳೆಗೆ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿದ್ದು, ಅಳಿದುಳಿದ ಬೆಳೆಯೂ ಸುರಿಯುತ್ತಿರುವ ಮಳೆಗೆ ನಾಶವಾದ ಹಿನ್ನೆಲೆ, ಸರ್ಕಾರ ಮತ್ತು ಬೆಳೆ ವಿಮಾ ಓರಿಯೆಂಟಲ್ ಕಂಪನಿಗಳು ಈ ಭಾಗದ ರೈತರಿಗೆ ಅನ್ಯಾಯ ಮಾಡುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವರ್ಷದ ಮುಂಗಾರು ಬೆಳೆ ಹುಲಸಾಗಿ ಬೆಳೆದಿದ್ದು, ಕೈ ಸೇರುವಷ್ಟರಲ್ಲಿ ಸತತ ಮಳೆ ಸುರಿದು ಹಾಳುಮಾಡಿದೆ. ಈ ಬಾರಿ ಗೋವಿನ ಜೋಳವು ರೈತರ ಕೈ ಹಿಡಿಯುತ್ತದೆ ಎಂದುಕೊಂಡು ಕಟಾವಿಗೆ ಬಂದ ಜೋಳ ಕೆಳಗೆ ಬಿದ್ದು ಮೊಳಕೆಯೊಡೆಯುತ್ತಿದೆ, ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಸರ್ಕಾರವು ಬೆಳೆಹಾನಿ ಸೇರಿದಂತೆ ಬೆಳೆ ವಿಮೆ ನೀಡಿಲ್ಲ ಎಂಬ ಪ್ರಶ್ನೆಗಳು ರೈತರಲ್ಲಿ ಮನೆ ಮಾಡಿದೆ.
