ಮಡಿಕೇರಿ : ಯೋಗಾಸನದ ಮೂರು ಬಂಗಿಗಳಲ್ಲಿ ಯೋಗ ಪ್ರದರ್ಶನ ಮಾಡಿ ಜನರ ಗಮನ ಸೆಳೆಯುವುದರ ಜೊತೆಗೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಬರೆದ ಕೊಡಗಿನ ಪುಟ್ಟ ಪೊರಿ ಸಿಂಚನ.
ಮೂಲತಃ ಕೊಡಗು ಜಿಲ್ಲೆಯ ಮದೆ ಗ್ರಾಮದ ಕೀರ್ತಿ ಕುಮಾರ್ ಹಾಗೂ ರೇಣುಕಾ ದಂಪತಿಯ ಪುತ್ರಿ. ಪ್ರಸ್ತುತ BGS ಶಾಲೆಯ 6 ನೇ ತರಗತಿಯಲ್ಲಿ ಓದುತ್ತಿರುವ ಈ ಪುಟ್ಟ ಬಾಲಕಿಯ ಸಾಧನೆಗೆ ಎಲ್ಲರನ್ನು ನಿಬ್ಬೆರಗಾಗಿಸುವಂತೆ ಮಾಡಿದೆ. ಯೋಗದಲ್ಲಿ ಬಹಳ ಉತ್ಸಾಹ ಇರೋ ಈ ಬಾಲಕಿ ಇದೀಗ ಮತ್ತೋಂದು ಸಾಧನೆಯ ಹಾದಿ ತುಳಿದಿದ್ದಾಳೆ. ಪ್ರಾಚೀನ ಆರೋಗ್ಯ ಕಲೆಯಾಗಿರುವ ಯೋಗಾಸನದ ಮೂಲಕ ಈಗಾಗಲೇ ವಿಶ್ವ ದಾಖಲೆ ನಿರ್ಮಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ. ಖಂಡಪೀಡಾಸನ ಭಂಗಿಯಲ್ಲಿ ಒಂದು ನಿಮಿಷ ಸಮಸ್ಥಿತಿಯಲ್ಲಿ ಇರುವುದು, ಧನುರಾಸನದಲ್ಲಿ ನಿಮಿಷಕ್ಕೆ 15 ಬಾರಿ ಸುತ್ತು ಹೊಡೆಯುವ ಹಾಗೂ ಡಿಂಬಾಸನದಲ್ಲಿ ನಿಮಿಷಕ್ಕೆ 10 ಬಾರಿ ಸುತ್ತು ಹೊಡೆಯುವ ಮೂಲಕ ಮತ್ತೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನ ಬರೆದಿದ್ದಾಳೆ. ಕಳೆದ ಬಾರಿ ಕೂಡ ಯೋಗಸಾನದ ಮೂರು ಆಸನ ಪ್ರದರ್ಶಿಸಿ ಸಾಧನೆ ಮಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಿಸಿದ್ದಳು. ಈ ಬಾರಿಯೂ ಮತ್ತೋಮ್ಮೆ ಸಾಧನೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ ಯೋಗ ಪಟ್ಟು ಸಿಂಚನಳ ಸಾಧನೆಯನ್ನ ಕೊಡಗಿನ ಶಾಸಕರು ಹಾಗೂ ಗಣ್ಯ ಅಥಿತಿಗಳು ಶ್ಲಾಘಿಸಿದ್ದಾರೆ.
