ಕೊಪ್ಪಳ :ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹೊಮ್ಮಿನಾಳ ಗ್ರಾಮದಲ್ಲಿ ಕೆರೆಗೆ ಈಜಲು ಹೋದ ಸಹೋದರರಿಬ್ಬರು ನೀರುಪಾಲಾದ ಘಟನೆ ನಡೆದಿದೆ.
ಜಮೀನಿನಿಂದ ಮನೆಗೆ ತೆರಳುವ ಸಂದರ್ಭದಲ್ಲಿ ಕೆರೆಗೆ ಈಜಲು ತೆರಳಿದ್ದ ಯಮನೂರು(14) ಮತ್ತು ಹನುಮೇಶ(12) ಎಂಬ ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಕ್ಕಳ ಸಾವನ್ನು ನೋಡಲಾಗದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ, ಸ್ಥಲಕ್ಕೆ ಆಗಮಿಸಿದ ತಾವರೆಗೇರಾ ಪೊಲೀಸ್ ಸ್ಥಳಕ್ಕೆ ಆಗಮಿಸಿ ಪರಿಶಿಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ
