ಗೋಕಾಕ್ : ದೇಶದ ಪ್ರಪ್ರಥಮ ಗೃಹ ಸಚಿವರಾದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ರ ವರ ಜನ್ಮದಿನದ ಅಂಗವಾಗಿ ಗೋಕಾಕ್ ಪೊಲೀಸ್ ಉಪ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಏಕತಾ ಓಟಕ್ಕೆ ಗೋಕಾಕ್ ತಹಶಿಲ್ದಾರ್ ಕಛೇರಿಯ ಡಾ.ಮೊಹನಬಸ್ಮೆ ಮತ್ತು ಡಿಎಸ್ಪಿ ರವಿ ನಾಯಕ ಏಕತಾ ಓಟಕ್ಕೆ ಹಸಿರು ನಿಶಾನೆ ಮೂಲಕ ಚಾಲನೆ ನೀಡಿದರು.
ಇಂಧು ನಡೆದ ಏಕತಾ ಓಟದಲ್ಲಿ ಪೊಲೀಸರು, ವಿವಿಧ ಶಾಲೆಗಳಿಂದ ಮತ್ತು ಹಳ್ಳಿಗಳಿಂದ ಆಗಮಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಯುವಕರು, ಪತ್ರಕರ್ತರು ಮತ್ತು ರೈತರು ಕೋಟಾ ಏಕತಾ ಓಟದಲ್ಲಿ ಭಾಗವಹಿಸಿದ್ದರು.
ನಗರದ ಬಸವೇಶ್ವರ ವೃತ್ತದಿಂದ ಬ್ಯಾಳಿಕಾಟಾ ನಾಕಾನಂ.1, ಎಸ್4 ಆಸ್ಪತ್ರೆ ಮುಖಾಂತರವಾಗಿ ಅಲ್ಲಿನ ಪೊಲೀಸ್ ಸಿಬ್ಬಂದಿಯಿಂದ ಚೀಟಿಯನ್ನು ಪಡೆದು ಎಪಿಎಂಸಿ ಮಾರ್ಗವಾಗಿ ಬಸವೇಶ್ವರ ವೃತ್ತದಲ್ಲಿ 8 ಕಿ ಮೀ. ಓಟವನ್ನು ಓಡಿ ಪೂರ್ಣಗೊಳಿಸಿದರು. ಪ್ರಥಮ ಸ್ಥಾನ ಬಂದವರಿಗೆ ಟ್ರೋಫಿ ಮತ್ತು ನಗದು ಬಹುಮಾನ ನೀಡಿ ಶುಭಕೋರಿದರು. ಅಲ್ಲದೆ ದ್ವಿತೀಯ ತೃತೀಯ ಸ್ಥಾನ ಬಂದವರಿಗೆ ಮತ್ತು ಸ್ಪರ್ಧಿಸಿದ ಓಟಗಾರರಿಗೆ ಸಮಾಧಾನಕರ ಬಹುಮಾನ ನೀಡಿದರು. ಈ ನಡುವೆ 5 2 ವರ್ಷದ ರೈತನೋರ್ವ ಓಟದಲ್ಲಿ 5 ನೇ ಸ್ಥಾನ ಪಡೆದು ಹೊಲದಲ್ಲೂ ಸೈ, ಓಟದಲ್ಲೂ ಸೈ ಎಂದು ತೋರಿಸಿಕೊಟ್ಟ ರೈತರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ನಗರ ಸಭೆ ಆಯುಕ್ತ ರವಿ ರಂಗಸುಬೆ, ಸಿಪಿಆಯ್ ಸುರೇಶಬಾಬು, ಪಿಎಸ್ಐ ಕೆ.ವಾಲಿಕಾರ, ತಾಲೂಕಾ ಕ್ರೀಡಾ ಸಂಯೊಜಕ ತೊರನಗಟ್ಟಿ, ಪಿಎಸ್ಐ ಯಮನಪ್ಪಾ ಮಾಂಗ,ಕಿರಣ ಡಮಾಮಗರ ಸೇರಿ ಹಲವರು ಉಪಸ್ಥಿತರಿದ್ದರು.
