
ಮೈಸೂರು: ರಾಜ್ಯದಲ್ಲಿ ದಿನೇ ದಿನೇ ವನ್ಯಪ್ರಾಣಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆ ದಾಳಿಗೆ ಜನರು ಬಲಿಯಾಗುತ್ತಿದ್ದಾರೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅತ್ತ ಕಾಡಿನಲ್ಲಿ ಜನರ ಓಡಾಟ ಹೆಚ್ಚಾಗಿದೆ, ಸಫಾರಿ, ರೆಸಾರ್ಟ್ಗಳು ಹೆಚ್ಚುತ್ತಿರುವ ಕಾರಣ ವನ್ಯಪ್ರಾಣಿಗಳು ನಾಡಿನತ್ತ ಮುಖಮಾಡಿವೆ.ಇತ್ತ ಜನರು ಕಾಡಿನಲ್ಲಿ ದಿನೇ ದಿನೇ ಭೇಟಿ ನೀಡುತ್ತಿರುವುದರಿಂದ ಮತ್ತು ರೆಸಾರ್ಟ್ ಮಾಡಿ ಅಲ್ಲಿನ ಜೀವಚರಗಳಿಗೆ ತೊಂದರೆಯನ್ನುಂಟುಮಾಡುತ್ತಿರುವುದರಿಂದ ಕಾಡಿನಲ್ಲಿ ನೀರು ಮತ್ತು ಆಹಾರವಿಲ್ಲದಿರುವುದು ಇದೂ ಒಂದು ಕಾರಣವಾಗಿದೆ. ಇದೇ ಕಾರಣದಿಂದ ವನ್ಯ ಪ್ರಾಣಿಗಳು ಮೇವು-ನೀರನ್ನು ಅರಸಿ ನಾಡಿನತ್ತ ಮುಖ ಮಾಡಿವೆ.
ಇದರ ವಿಚಾರವಾಗಿ ನಿನ್ನೆ ಕೆಲ ಸಚಿವರ ಜೊತೆ ಚಾಮರಾಜನಗರದಲ್ಲಿ ಸಭೆ ಮಾಡಿ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಸಭೆ ಮಾಡಿ ಅಕ್ರಮ ರೆಸಾರ್ಟ್ಗಳಿಗೆ ಕಡಿವಾಣ ಹಾಕುವ ಕೆಲಸ ಮಾಡುತ್ತೇವೆ. ಬಿಹಾರ ಚುನಾವಣೆಗೆ ಹೋಗುವ ವಿಚಾರವಾಗಿ ಸಿಎಂ ಹಳಿಕೆ ನೀಡಿದ್ದು, ನನಗೆ ಇಲ್ಲಿವರೆಗೂ ಯಾವುದೇ ಕರೆ ಬಂದಿಲ್ಲದ ಕಾರಣ, ಏನಾದರೂ ಕರೆ ಬಂದರೆ ಹೋಗ್ತೇನೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಬಿಹಾರ ಚುನಾವಣೆ ಬಗ್ಗೆ ಮಾತನಾಡಿದಾಗ, ನನ್ನ ಪ್ರಕಾರ ಇಂಡಿಯಾ ಮೈತ್ರಿಕೂಟ ಚುನಾವಣೆ ಗೆಲ್ಲಲಿದೆ, ಬಿಹಾರ ಚುನಾವಣೆ ಸದ್ಯ ಇಂಡಿಯಾ ಮೈತ್ರಿಕೂಟಾ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲಿದೆ. ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
