ಕೊಡಗು : ಕುಶಾಲನಗರದ ಕೊಡಗರ ಹಳ್ಳಿಯ ಸಮೀಪದ ಅಂದಗೋವೆ ಗ್ರಾಮದಲ್ಲಿ ನಿನ್ನೆ ರಾತ್ರಿ ಮುತ್ತ ಎಂಬಾತನಿಂದ ಪತ್ನಿ ಲತಾಳ ಮೇಲೆ ಭಿಕರವಾಗಿ ಮಾರಣಾಂತಿಕ ಹಲ್ಲೆ ನಡೆಸಿದ ಹಿನ್ನೆಲೆ ಆರೋಪಿ ಮುತ್ತಾನನ್ನು ಸುಂಟಿಕೊಪ್ಪ ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸುಂಟಿಕೊಪ್ಪ ಮತ್ತು ಕುಶಾಲನಗರ ಪೊಲೀಸ್ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಪ್ರಕರಣ ಸಂಬಂಧ ಸೂಕ್ತ ಕಾರಣ ತಿಳಿದು ಬಂದ ನಂತರ ಆರೋಪಿ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
