
Bengalure : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ದರ್ಶನ್, ಪವಿತ್ರ ಗೌಡ, ಮತ್ತು 17 ಆರೋಪಿಗಳು ಸೇರಿದಂತೆ ಅವರ ವಿರುದ್ಧ ನವಂಬರ್ 3 ರಂದು ನಡೆದ ಬೆಂಗಳೂರಿನ 64ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ (CCH) ಮುಂದೆ ಹಾಜರಾದರು. ನ್ಯಾಯಾಲಯವು ದೋಷಾರೋಪಿತರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾತಿ ಮಾಡಲಾಯಿತು. ದೋಷಾರೋಪಿತರ ಹೆಸರನ್ನು ಕರೆದು ಹಾಜರಾತಿ ಖಚಿತಪಡಿಸಿಕೊಂಡು ದರ್ಶನ್ ಪರ ವಕೀಲ ಸುನೀಲ್ ಅವರ ಎಲ್ಲ ಆರೋಪಿಗಳಿಗೆ ಯಾವುದೇ ಸೂಚನೆ ನೀಡಿಲ್ಲ ಎಂದು ತಿಳಿಸಿ ಇನ್ನೋಮದು ದಿನಾಂಕ ನಿಗಧಿಪಡಿಸಬೇಕೆಂದು ಮನವಿ ಮಾಡಿದರು. ಇದರಲ್ಲಿ ಇಬ್ಬರು ಆರೋಪಿಗಳು ಗೈರಾದ ಹಿನ್ನಲೆ ವಿಚಾರಣೆಗೆ ಮುನ್ನ ಎರಡು ವಾರ ಸಮಯ ನೀಡಲು ವಿನಂತಿಸಿಕೊಂಡಿದ್ದಾರೆ.
ಪ್ರಕರಣ ಸಂಬಂಧ ವಿಚಾರಣೆಯಲ್ಲಿ ಸಾಕ್ಷ್ಯಗಳಾಗಿ ಸಿಸಿಟಿವಿ ದೃಶ್ಯಗಳು, ಮೊಬೈಲ್ ಸಂಪರ್ಕ ದಾಖಲೆಗಳು, ವೈದ್ಯಕೀಯ ವರದಿಗಳು ಮತ್ತು ಸಾಕ್ಷಿದಾರರ ವರದಿಗಳನ್ನು ನ್ಯಾಯಾಲಯ ಪರಿಗಣಿಸಿ, ಮುಂದಿನ ವಿಚಾರಣೆಯನ್ನು ನ.೧೦ಕ್ಕೆ ನಿಗದಿಪಡಿಸಿದೆ. ಈ ಪ್ರಕರಣದ ಕುರಿತು ಸಿನೆಮಾ , ರಾಜಕೀಯ ಮತ್ತು ಮಾಧ್ಯಮಗಳಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ
