ಹುಣಸೂರು : ಪಂಚಾಯಿತಿ ಸದಸ್ಯರೊಬ್ಬರ ಮೇಲೆ ಮನಬಂದಂತೆ ಮಾರಕಾಸ್ತ್ರಬೀಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆಯೊಂದು ಹುಣಸೂರಿನ ಶಬ್ಬಿರ್ ನಗರದಲ್ಲಿ ನಡೆದಿದೆ.
ಮೈಸೂರ ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಖಜರ್ ಪಾಶಾ ಕೊಲೆಯಾದ ವ್ಯಕ್ತಿ(47). ಖಿಜರ್ ಪಾಶಾ ಮತ್ತು ತನ್ನ ಸಹೋದರಿ, ಪುತ್ರರ ಜೊತೆ ಶಬ್ಬಿರ್ ನಗರದ ಮನೆಯೊಂದರಲ್ಲಿ ಝಕರ್ ಸಲ್ಲಿಸಲು ಶುಕ್ರವಾರ ಆಗಮಿಸಿದ ಹಿನ್ನೆಲೆ, ಇದೇ ಸಂದರ್ಭದಲ್ಲಿ ಗುಜುರಿ ವ್ಯಾಪಾರಿ ಈ ಏಜಾಜ್ಪಾಷಾ ಇವರ ಪುತ್ರ ಮಹಮದ್ ಸಾದ್ ತಮ್ಮ ಸಹಚರರೊಂದಿಗೆ ಆಗಮಿಸಿ ಏಕಾಏಕಿ ಮನಸೋಯಿಚ್ಚೆ ಮಾರಕಾಸ್ತ್ರದಿಂದ ಹಲ್ಲೆಗೆ ಮುಂದಾದಾಗ ಪ್ರಾಣ ಉಳಿಸಿಕೊಳ್ಳಲು ಕಾರಿನತ್ತ ಹೋಗುವ ಸಂದರ್ಭದಲ್ಲಿ ದಾಳಿ ನಡೆಸಿದ ತೀವ್ರತೆಗೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಳೇ ದ್ವೇಷ: ಕಳೆದ 6 ತಿಂಗಳ ಹಿದೆಯಷ್ಟೇ ಭೂ ವಿವಾದ ಹಿನ್ನೆಲೆ ಖಿಜರ್ ಪಾಷಾ ಮೇಲೆ ಆರೋಪಿಗಳಿಂದ ಏಜಾಜ್ ಪಾಷಾರವರ ಪುತ್ರ ಮಹಮದ್ ಸಾಬ್ ತಮ್ಮ ಸಹಚರರೊಂದಿಗೆ ಹಲ್ಲೆ ನಡೆಸಿದ್ದರು.ಈ ಸಂಬಂಧ ಸಾಲಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಖಿಜರ್ಪಾಷಾರ ಸಹೋದರ ಅಜ್ಜರ್ಪಾಷಾ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಎಸ್.ಪಿ.ವಿಷ್ಣುರ್ಧನ್, ಅಡಿಷನಲ್ ಎಸ್.ಪಿ.ಮಲ್ಲಿಕ್, ಡಿವೈಎಸ್ಪಿ ರವಿಕುಮಾರ್, ಎಸ್.ಐ.ಜಮೀರ್ಅಹಮದ್ ಭೇಟಿ ಇತ್ತು ಪರಿಶೀಲಿಸಿದರು.
