


ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ನೂರಾರು ಶವ ಹೂತಿಟ್ಟ ಪ್ರಕರಣ ಕುರಿತು ಎಸ್ಐಟಿ ತನಿಖೆಗೆ ತಡೆ ನೀಡಿದ್ದ ಹೈ ಕೋರ್ಟ್ ಈಗ ತೆರವು ಮಾಡಿದೆ. ಕೋರ್ಟ್ನ ನಡೆಗೆ ಬುರುಡೆ ಗ್ಯಾಂಗ್ಗೆ ಹಿನ್ನಡೆ ಉಂಟಾಗಿದ್ದು,ಎಸ್ಐಟಿ ತನಿಖೆ ವೇಳೆ ಅವರಿಗೆ ಸಹಕರಿಸಬೇಕು ಎಂದು ಕೋರ್ಟ್ ಆದೇಶ ಹೊರಡಿಸಿದೆ. ಪ್ರಕರಣ ಸಂಬಂಧ ಅ.30 ರಂದು ಮಧ್ಯಂತರ ಆದೇಶವನ್ನು ಬುಧವಾರ ತೆರವುಗೊಳಿಸಿದ್ದು. ಬುರುಡೆ ಗ್ಯಾಂಗ್ಗೆ ಹಿನ್ನಡೆ ಉಂಟಾಗಿದೆ.
ಅರ್ಜಿ ವಿಚಾರವಾಗಿ ಪ್ರಕರಣ ಕುರಿತು ತಮಗೆ ನೀಡಿರುವ ನೋಟಿಸ್ ರದ್ದುಪಡಿಸಬೇಕೆಂದು ಕೋರಿ ಸೌಜಕನ್ಯ ಪರ ಹೋರಾಟಗಾರರಾದ ಮಹೇಶ್ ತಿಮರೋಡಿ,ಗಿರೀಶ್ ಮಟ್ಟಣ್ಣವರ್ ಮಠ್ಠನ್ ಗೌಡ ಮತ್ತು ಟಿ.ಜಯಂತ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಇದರ ವಿಚಾರವಾಗಿ ಹೈಕೋರ್ಟ್ ಎಫ್ಐಆರ್ ಸಂಬಂಧಿಸಿದಂತೆ ಬುಧವಾರ ನ್ಯಾ.ಮೊಹಮ್ಮದ್ ನವಾಜ್ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿದ್ದು, ತಡೆಯಾಜ್ಱ ತೆರವುಗೊಳಿಸದಿದ್ದರೆ ತನಿಖೆಗೆ ಅಡ್ಡಿಯಾಗುತ್ತದೆ ಎಂದು ರಾಜ್ಯ ಸರ್ಕಾರಿ ಅಭಿಯೋಜಕರು ಕೋರಿದ್ದಾರೆ.
