
ಉತ್ತರ ಕನ್ನಡ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಉಮ್ಮಚಗಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ಬೆಳಗಿನ ಜಾವ ದರೋಡೆ ಯತ್ನ ನಡೆದಿದೆ. ಖದೀಮರು ಬ್ಯಾಂಕ್ನಲ್ಲಿ ಬೆಳಗಿನ ಜಾವ ದರೋಡೆ ಮಡಲು ಯತ್ನಿಸಿದ್ದಾರೆ, ಬ್ಯಾಂಕ್ ಕಿಟಕಿ ಒಡೆದು ಒಳ ನುಸುಳಿ ಬ್ಯಾಂಕ್ನಲ್ಲಿದ್ದ ಸೇಫ್ ಲಾಕರ್ ಮತ್ತು ಕ್ಯಾಶ್ ಕೌಂಟರ್ ಮುರಿದು ದರೋಡೆ ಮಾಡಲು ಯತ್ನಿಸುತ್ತಿದ್ದರು. ಆದರೆ , ಆ ವೇಳೆಯಲ್ಲಿ ಬ್ಯಾಂಕ್ನ ಸೈರನ್ ಎಚ್ಚರಿಕೆ ಗಂಟೆ ಕೂಗಿದಾಗ ಸೈರನ್ ಶಬ್ದ ಕೇಳಿದ ಕಳ್ಳರು ಭಯಗೊಂಡು ಬ್ಯಾಂಕ್ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಬೆಂಕಿ ಪರಿಣಾಮಾವಾಗಿ ಬ್ಯಾಂಕ್ನ ದಾಖಲೆಗಳು ಮತ್ತು ಕಂಪ್ಯೂಟರ್ ಉಪಕರಣಗಳು ಬೆಂಕಿಗಾಹುತಿಯಾಗಿವೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಯವರು ಬೆಂಕಿ ನಿಯಂತ್ರಣ ಮಾಡಿದರು, ಕಳ್ಳರನ್ನು ಹಿಡಿಯುವಲ್ಲಿ ವಿಫಲರಾದರು. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಬ್ಯಾಂಕ್ ಒಳಗಿನ ಸಿಸಿಟಿವಿ ಫೂಟೇಜ್ ನಾಶವಾದ ಹಿನ್ನೆಲೆ ಗಹನ ತನಿಖೆ ನಡೆಸಲಾಗುತ್ತಿದೆ. ಯಲ್ಲಾಪುರದ ಶಾಖೆಯಿಂದ 2.69 ಕೋಟಿ ರೂ. ಲಪಟಾಯಿಸುವ ಕಳ್ಳತನ ಮತ್ತು ವಂಚನೆ ಪ್ರಕರಣ ಬಂದಿದ್ದು, ಸಹಾಯಕ ಮ್ಯಾನೇಜರ್ ತನ್ನ ಹೆಂಡತಿ ಖಅತೆಗೆ ಹಣ ವರ್ಗಾವಣೆ ಮಾಡಿಕೊಂಡು ಪರಾರಿಯಾಗಿರುವುದಾಗಿ ಪೊಲೀಶ್ ಮಾಹಿತಿ ನೀಡಿದ್ದಾರೆ. ಇನ್ನು ಈ ಪ್ರಕರಣ ಕುರಿತು ಕಾರ್ಯಾಚರಣೆ ನಡೆಸುತ್ತಿದ್ದಾರೆ.
