
ಬೆಂಗಳೂರು|ಬಿಹಾರ್ : ದೇಶದಾದ್ಯಂತ ಭಾರಿ ಕುತೂಹಲವನ್ನ ಕೆರಳಿಸಿದ ಬಿಹಾರ ಚುನಾವಣೆಯ ಫಲಿತಾಂಶ ಇಂದು ಬಿಡುಗಡೆ . ಬಿಹಾರದಲ್ಲಿ ಏನ್ ಡಿ ಎ ಪಕ್ಷದ ನಿತೀಶ್ ಕುಮಾರ್ ಈಗಾಗಲೇ ೨೦ ವರ್ಷಗಳಿಂದ ಅಧಿಕಾರದಲ್ಲಿದ್ದು ಜನರ ಮನಸ್ಸನ್ನು ಗೆದ್ದಿದ್ದಾರೆ. ಇನ್ನು ಮಹಾಘಾಟ್ ಬಂದನ್ ನ್ ತೇಜಸ್ವಿ ಯಾದವ್ ಗೆ ಅಧಿಕಾರ ಇಂದಲ್ಲ ನಾಳೆ ಸಿಕ್ಕೇ ಸಿಗುತ್ತೆ ಅನ್ನೋ ನಂಬಿಕೆಯಲ್ಲಿ ಇದ್ರು. ಇಲ್ಲಿ ಒಬ್ಬ ವ್ಯೆಕ್ತಿ ಚುನಾವಣೆಯಲ್ಲಿ ಗೆದ್ದು ಬೀಗಿದರೆ , ಇನ್ನೊಬ್ಬರಿಗೆ ಸೋಲು ಕಟ್ಟಿಟ್ಟ ಬುತ್ತಿ . ರಾಜಕೀಯದಲ್ಲಿ ಸೋಲು ಗೆಲುವು ಇದ್ದಿದ್ದೇ ಆದ್ರೆ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ನನ್ನ ಸೋಲಿಸುವಂಥ ವ್ಯೆಕ್ತಿ ಬರೋದು ಕಷ್ಟ ಅಂತ ಎಲ್ಲರಿಗು ಗೊತ್ತಿರೆಯುವಂಥದ್ದೇ. ಆದ್ರೆ ಇದಕ್ಕೆ ತೊಡೆ ತತ್ತಿ ನಿಂತದ್ದು ತೇಜಸ್ವಿ ಯಾದವ್.
ಚುನಾವಣೆಯ ಪ್ರಚಾರದ ವೇಳೆ ತೇಜಸ್ವಿ ಯಾದವ್ ಗೆ ಸಾಥ್ ಆಗಿ ರಾಹುಲ್ ಗಾಂಧಿ ಹೆಜ್ಜೆಯನ್ನ ಇಡ್ತಾರೆ . ತಮ್ಮ ಪಕ್ಷವನ್ನ ಮೆಚ್ಚಿಸುವ ಬರದಲ್ಲಿ ಬೇರೆ ಪಕ್ಷದ ಮೇಲೆ ಗೂಬೆ ಕುರಿಸುವಂಥ ಪ್ರಯತ್ನ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ . ಏಕೆಂದ್ರೆ ರಾಹುಲ್ ಗಾಂಧಿ ಬಿಜೆಪಿ ವಿರುದ್ಧವಾಗಿ ಒಂದು ರ್ಯಾಲಿಯನ್ನೇ ಮಾಡ್ತಾರೆ . ಬಿಜೆಪಿ ಅವರು ವೋಟ್ ಚೋರಿ ಮಾಡಿದ್ದಾರೆ ಎಂದು ಆರೋಪ ಮಾಡಿ ಜನರ ಮನಸನ್ನ ಗೆಲ್ಲುವುದಕ್ಕೆ ಪ್ರಯತ್ನ ಪಡ್ತಾರೆ. ಆದ್ರೆ ಜನರಿಗೆ ಗೊತ್ತು ಯಾವುದು ನಿಜ ಯಾವುದು ಸುಳ್ಳು ಅಂತ . ಮಹಾಘಾಟ್ ಬಂದನ್ ಪಕ್ಷದ ತೇಜಸ್ವಿಯಾದವ್ ಗೆ ರಾಹುಲ್ ಗಾಂಧಿ ಜೊತೆನ್ ಇರೋ ಕಾರಣ ತಾನು ಗೆದ್ದೇ ಗೆಳತೀನಿ ಅನ್ನೋ ಬರವಸೆಯನ್ನ ಇಟ್ಕೊಂಡಿರ್ತಾನೆ. ಆದ್ರೆ ಜನರ ತೀರ್ಪೆ ಅಂತಿಮ ತೀರ್ಪು ಜನರ ನಿರ್ದಾರವೇ ಅಂತಿಮ ನಿರ್ದಾರ ಅಂತ ಅವರಿಗೆ ಗೊತ್ತಿಲ್ಲ ಅನ್ಸುತ್ತೆ.
ಚುನಾವಣಾ ಕಣದಲ್ಲಿ ಯಾರಿಗೆ ಜಯ ಯಾರಿಗೆ ಭಯ ಅನ್ನೋದೇ ಗೊತ್ತಾಗಲ್ಲ ಒಂದೊಂದು ಬಾರಿ ಯಾವ ವ್ಯೆಕ್ತಿ ಗೆಲ್ಲುತ್ತಾನೆ ಅಂತ ಎಲ್ಲರು ಊಹಿಸಿರುತ್ತಾರೋ ಅಂಥಾವ್ರೆ ಸೋಲನ್ನ ಕಾಣ್ತಾರೆ. ಅದಕ್ಕೆ ಹೇಳೋದು ರಾಜಕೀಯ ಚುನಾವಣೆಯನ್ನ ಪ್ರೆಡಿಕ್ಟ್ ಮಾಡಲು ಸಾಧ್ಯವಿಲ್ಲ ಅಂತ. ಆದ್ರೆ ಬಿಹಾರ ಚುನಾವಣೆಯಲ್ಲಿ ಪ್ರತಿ ಬಾರಿ ಪ್ರೆಡಿಕ್ಟ್ ಮಾಡಿದ್ದ ಹಾಗೆ ನಡೆಯುತ್ತಿರಲಿಲ್ಲ ಈ ಭಾರಿ ಜನರ ಮನಸ್ಸನ್ನು ಗೆಲ್ಲುವ ನಾಯಕ ಯಾರೆಂದು ಎಲ್ಲರಿಗು ಗೊತ್ತಾಗಿತ್ತು. ಈಗಾಗಲೇ ಎಕ್ಸಿಟ್ ಪೋಲ್ ನಲ್ಲೂ ಸಹ ಸಾಕಷ್ಟು ಸಂಸ್ಥೆಗಳು ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತ ಹೇಳಿತ್ತು. ಆದರು ನ. ೧೪. ಶುಕ್ರವಾರ ದಿನದಂದು ಮತ ಎಣಿಕೆ ಶುರುವಾಯ್ತು . ಬಿಹಾರ ಚುನಾವಣೆಯ ಫಲಿತಾಂಷ ಏನಾಗುತ್ತೆ ಅನ್ನೋ ಆತಂಕ ರಾಜಕಾರಣಿಗಳಲ್ಲಿ ಹೆಚ್ಚಾಗ್ತನೇ ಬಂತು .
ಭಾರತದಾದ್ಯಂತ ಚರ್ಚೆ ಮತ್ತು ಕುತೂಹಲವನ್ನ ಬಿಹಾರ ಚುನಾವಣೆ ಕೆರಳಿಸಿತ್ತು . ಬಿಹಾರದ ೨೪೩ ವಿದಾನ ಸಭಾ ಕ್ಷೇತ್ರಗಳಲ್ಲಿ ಮೊದಲ ಎರಡು ಅಂಥದ ಮತವನ್ನ ಚಲಯಿಸಿಲಾಗಿತ್ತು. ಬಿಹಾರದಲ್ಲಿರುವಂಥ ೩೮ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ೧೨೧ ಮತ್ತು ಎರಡನೇ ಹಂತದಲ್ಲಿ ೧೨೨ ಕ್ಷೆತ್ರಗಳಲ್ಲಿ ಮತ ಚಲಾಯಿಸಲಾಗಿತ್ತು. ಜನರ ಮನಸ್ಸನ್ನು ಗೆಲ್ಲುವುದಕ್ಕೆ ಎಲ್ಲ ಪಕ್ಶದವರು ಅವರದೇ ಆದಂಥ ಸ್ಟ್ರಾಟರ್ಜಿಯನ್ನಬಳುಸುತ್ತಾರೆ. ಆದ್ರೆ ಏನೇ ಸ್ಟ್ಯಾಟರ್ಜಿ ಬಳಸಿದ್ರು ಜನರ ಮನಸ್ಸನ್ನು ಗೆಲ್ಲುವುದು ಸುಲಭವಲ್ಲ. ಬಿಹಾರದಲ್ಲಿ ಮಹಾಘಾಟ್ ಬಂದನ್ ಮತ್ತು ಏನ್ ಡಿ ಎ ಜಿದ್ದಾಜಿದ್ದಿಗೆ ಬೀಳುತ್ತೆ ಅಂತ ಅನ್ಕೊಂಡ್ರೆ ಅದೆಲ್ಲ ಇಲ್ಲಿ ತಲೆ ಕೆಳಗಾಯ್ತು. ಎರಡು ಪಕ್ಶಗಳ ನಡುವೆ ಸಮರ ನಡೆಯುತ್ತೆ ಅನ್ಕೊಂಡ್ರೆ , ಇಲ್ಲಿ ನಡೆದಿದ್ದೇ ಬೇರೆ .
2025ರ ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆದಿದ್ದು . ಇಲ್ಲಿಯವರೆಗಿನ ಪ್ರವೃತ್ತಿಗಳು NDA ಮೈತ್ರಿಕೂಟವು ಪ್ರಚಂಡ ಬಹುಮತದತ್ತ ಸಾಗುತ್ತಿರುವುದನ್ನು ತೋರಿಸುತ್ತಿವೆ. ಇತ್ತ ಮಹಾ ಮೈತ್ರಿಕೂಟವು ಭಾರೀ ಹಿನ್ನಡೆಯಲ್ಲಿ ಇದೆ. ಈ ಫಲಿತಾಂಶದಿಂದ ಹೊರಹೊಮ್ಮುತ್ತಿರುವ ಸ್ಥಾನಗಳು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತಿದೆ. ಬಿಹಾರದ ಜನರು ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಅವರನ್ನು ನಂಬುವುದನ್ನು ಮುಂದುವರೆಸಿದ್ದಾರೆ ಎನ್ನಲಾಗಿದೆ. ನೀತಿಶ್ ಕುಮಾರ್ ಗೆ ಸಾತ್ ಅಗಿ ನರೇಂದ್ರ ಮೋದಿ ನಿಂತಿದ್ದು ನೀತಿಶ್ ಗೆಲುವಿಗೆ ಇದು ಒಂದು ಕಾರಣ ಎನ್ನಬಹುದು.
“ದಸ್ ಹಜಾರಿ ಚುನಾವ್ ಹೈ, ದೂಸ್ರಿ ತರಫ್ ಕಟ್ಟಾ ಸರ್ಕಾರ್ ಹೈ . ಈ ಒಂದು ಸಾಲು 2025ರ ಬಿಹಾರ ಚುನಾವಣೆಯ ಬಗ್ಗೆ ಮುಖ್ಯವಾದ ಮಾಹಿತಿಯನ್ನು ನೀಡುತ್ತದೆ. ಬಿಹಾರದ ಜನರು ಎನ್ಡಿಎ ಯನ್ನು ಬೆಂಬಲಿಸಲು ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಕೈ ಹಿಡಿಯಲು 5 ಪ್ರಮುಖ ಕಾರಣಗಳಿವೆ. ಆ 5 ಯೊಜನೆಗಳಿಗೆ ಜನರು ನಿತೀಶ್ ಅವ್ರನ್ನ ಬಿಟ್ಟು ಕೊಟ್ಟಿಲ್ಲ. ನಿತೀಶ್ ಕುಮಾರ್ ನ ಆ 5 ಯೊಜನೆಗಳು ಯಾವುವು ಗೊತ್ತಾ ?
ಒಂದು ಬದಿ ₹10,000 ಬ್ಯಾಂಕ್ ಖಾತೆಗೆ ಬಂದಿದೆ, ಮತ್ತೊಂದು ಬದಿ “ಆರ್ಜೆಡಿ ಬಂದ್ರೆ ಮತ್ತೆ ಬಂದೂಕು-ಗುಂಡಿನ ರಾಜಕಾರಣ ಶುರುವಾಗುತ್ತೆ” ಎಂಬ ಭಯ. ಈ ಎರಡೂ ಸಂದೇಶಗಳು ಒಟ್ಟಾಗಿ ಎನ್ಡಿಎಗೆ ಭರ್ಜರಿ ಗೆಲುವು ತಂದುಕೊಟ್ಟವು ಎಂದು ಹೇಳಲಾಗುತ್ತಾ ಇದೆ. ನಿತೀಶ್ ಕುಮಾರ್ 1.3 ಕೋಟಿ ಮಹಿಳೆಯರಿಗೆ ₹10,000 ನೇರವಾಗಿ ಖಾತೆಗೆ ಜಮಾ ಮಾಡಿದ್ದು ಚುನಾವಣೆಯ ಆಟವನ್ನೇ ಬದಲಾಯಿಸಿತು. ಈ ಹಣ ಈಗಾಗಲೇ ಖಾತೆಯಲ್ಲಿತ್ತು. ತೇಜಸ್ವಿ ಯಾದವ್ “ನಾನು ಗೆದ್ದರೆ ತಿಂಗಳಿಗೆ ₹2,500 ಕೊಡ್ತೀನಿ” ಎಂದು ಭರವಸೆ ಕೊಟ್ರು, ಆದ್ರೆ ಮಹಿಳೆಯರು “ನಿತೀಶ್ಜೀ ಈಗಾಗಲೇ ₹10,000 ಕೊಟ್ಟಿದ್ದಾರೆ, ಭವಿಷ್ಯದ ಭರವಸೆ ಯಾಕೆ ಬೇಕು?” ಎಂದು ಪ್ರಶ್ನಿಸಿದರು. ನಂತರ ಫಲಿತಾಂಶ ಎಂದರೆ ದಾಖಲೆಯ ಶೇ.71ಕ್ಕಿಂತ ಹೆಚ್ಚು ಮಹಿಳಾ ಮತದಾನ, ಮತ್ತು ಅವರೆಲ್ಲ ಎನ್ಡಿಎ ಪರವಾಗಿಯೇ ಬಂದಿದೆ.
