ಬಾಗಲಕೋಟೆ: ಬಾಗಲಕೋಟೆಯಲ್ಲಿ ಮಾಲೀಕನ ಪತ್ನಿ ಜೊತೆ ಚಾಲಕ ಸಲುಗೆಯಿಂದ ಮಾತನಾಡಿದ್ದಕ್ಕೆ ಹಲ್ಲೆ. ಮಾಲೀಕನ ಮನೆಯಲ್ಲಿ ಗೂಡ್ಸ್ ವಾಹನ ಚಾಲಕನಾಗಿದ್ದ ಪ್ರಕಾಶ್ ಹೊಸಮನಿ(25) ಯಂಕಪ್ಪ ಚೂರಿಯ ಪತ್ನಿ ಜೊತೆ ಸಲುಗೆಯಿಂದ ವರ್ತಿಸುತ್ತಿದ್ದ ಚಾಲಕ. ಮಾಲೀಕನ್ನು ಅಪಹರಣ ಮಾಡಿ ತುಳಸಿಗೇರಿ ಗುಡ್ಡದ ಬಳಿ ಕರೆದುಕೊಂಡು ಹೋಗಿ ಚಾಲಕನ ಕೈ- ಕಾಲುಗಳನ್ನು ಕಟ್ಟಿಹಾಕಿ ಕೋಲಿನಿಂದ ಹಿಗ್ಗಾ-ಮುಗ್ಗಾ ಥಳಿಸಿದ್ದಾನೆ. ಚಾಲಕನ ಜೊತೆಯಿದ್ದ ತನ್ನ ಪತ್ನಿಗೂ ಹಲ್ಲೆ ಮಾಡಿದ ಮಾಲಿಕ. ಅ.3ರಂದು ಪ್ರಕರಣ ಬೆಳಕಿಗೆ ಬಂದಿದ್ದು, ಹಲ್ಲೆ ಮಾಡಿರುವ ದೃಶ್ಯ ಬಹಿರಂಗವಾಗಿದೆ. ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದ ಯಂಕಪ್ಪ ಚೂರಿ,ಪರಸಪ್ಪ ಮಾದರ, ತುಳಸಪ್ಪ ಚೂರಿ, ಸಂಗಮೇಶ್ ಗೌಡರ ಸೇರಿ 10 ಜನರ ವಿರುದ್ಧ ದೂರು ದಾಖಲು ಮಾಡಿದ್ಧಾರೆ.
