ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಬೆಳ್ಳಂ ಬೆಳಗ್ಗೆ ಸದ್ದು ಮಾಡಿದ ಪೊಲೀಸ್ ಗನ್.ಕೊಲೆ ಮಾಡಿದ ಆರೋಪಿಗಳ ಕಾಲಿಗೆ ಗುಂಡು ಹೊಡೆದಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಹಳೇ ದ್ವೇಷದ ಕಾರಣ ಹುಬ್ಬಳ್ಳಿಯ ಮಂಟೂರು ರೋಡ್ ಬ್ಯಾಳಿ ಫ್ಲಾಟ್ ಬಳಿ ಮಲ್ಲಿಕ ಅದಂಬಾಯಿ ಎಂಬಾತನನ್ನು ಸೆಟ್ಲಿಮೆಂಟ್ ಗ್ಯಾಂಗ್ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪ್ರಕರಣ ಸಂಬಂಧ 3 ಆರೋಪಿಗಳನ್ನು ನಬಂಧನ ಮಾಡಿದ್ದು, ಉಳಿದ ಆರೋಪಿಗಳನ್ನು ಪ್ರಕರಣ ಸಂಬಂಧಿತ ಸ್ತಳಕ್ಕೆ ಕರೆದೊಯ್ದಾಗ ಆರೋಪಿಗಳು ಪೊಲೀಸರ ಮೆಲೆ ಕಲ್ಲು ತೂರಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಇನ್ಸ್ಪೆಕ್ಟರ್ ಎಸ್.ಆರ್.ನಾಯ್ಕ ತಂಡದವರು ಆರೋಪಿ ಬಾಳರಾಜು \ಬಂಗಾರ ಬಾಲ್ಯಾ, ಮಹಮ್ಮದ್ ಶೇಖ್ ಆರೋಪಿಗಳ ಕಾಳಿಗೆ ಗುಂಡು ಹಾರಿಸಿದ್ದಾರೆ. ಫೈರಿಂಗ್ ವೇಳೆ ಕೆಲ ಪೊಲೀಸ್ ಸಿಬ್ಬಂದಿಗಳು ಗಂಭೀರವಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಆರೋಗ್ಯವನ್ನು ವಿಚಾರಿಸಿದ್ದಾರೆ.
