ಸೌದಿ ಅರೇಬಿಯಾ: ಸೌದಿ ಅರೇಬಿಯಾದಲ್ಲಿ ಮೆಕ್ಕಾದಿಂದ ಮದೀನಾಕ್ಕೆ ತೆರಳುತ್ತಿದ್ದ ಬಸ್, ಸುಮಾರು ಮಧ್ಯರಾತ್ರಿ 1:30ರ ವೇಳೆಯಲ್ಲಿ ಬಸ್-ಡೀಸೆಲ್ ಟ್ಯಾಂಕರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬಸ್ನಲ್ಲಿದ್ದ ಪ್ರಯಾಣಿಕರು ಸಜೀವ ದಹನ.
ಸೌದಿ ಅರೇಬಿಯಾದ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮಧ್ಯರಾತ್ರಿ 1:30ಕ್ಕೆ ಈ ದುರ್ಘಟನೆ ಸಂಭವಿಸಿದೆ. ನಿದ್ದೆ ಮಂಪರಿನಲ್ಲಿ ಪ್ರಯಾಣ ಮಾಡುತ್ತಿದ್ದ ಚಾಲಕ ಮತ್ತು ಯಾತ್ರಿಕರು ಡೀಸೆಲ್ ಟ್ಯಾಂಕರ್ ನಡುವೆ ಡಿಕ್ಕೆ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಮೆಕ್ಕಾದಿಂದ ಮದೀನಕ್ಕೆ ತೆರಳುತ್ತಿದ್ದ ವೇಳೆ ತೆಲಂಘಾಣ ಮೂಲದ ಭಾರತೀಯರು ಇದ್ದರು ಎಂದು ವರದಿ ಬಂದಿವೆ. ಅಪಘಾತದಲ್ಲಿ ಸುಮಾರು 42 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಜಿಡ್ಡಾದ ಭಾರತೀಯ ರಾಯಭಾರ ಕಚೇರಿ ಮತ್ತು ರಿಯಾದ್ನಲ್ಲಿರುವ ರಾಯಭಾರ ಕಚೇರಿಯು ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಮತ್ತು ಸಂಬಂಧಪಟ್ಟ ಉಮ್ರಾ ನಿರ್ವಾಹಕರ ಸಂಪರ್ಕದಿಂದ ಮಾಹಿತಿ ಕಲೆಹಾಕಿ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿವೆ.
ಅಪಘಾತ ಸಂಭವಿಸಿದ ಕುರಿತು, ಭಾರತದ ಪ್ರಧಾನಮಂತ್ರಿ , ವಿದೇಶಾಂಗ ಸಚಿವ ಡಾ.ಎಸ್.ಜೈ ಶಂಕರ್ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಇನ್ನು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಕೂಡಾ ಬಸ್ ಅಪಘಾತದ ಬಗ್ಗೆ ಆಘಾತ ವ್ಯಕ್ತಪಡಿಸಿದ್ಧಾರೆ.
