ಸರಗೂರು: ಸರಗೂರಿನ ಎನ್.ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚನಹಳ್ಳಿ-ಕಾಳಯ್ಯನಹಳ್ಳಿ ಗ್ರಾಮ ಸಂಪರ್ಕದ ರಸ್ತೆಯ ಪಕ್ಕದ ಜಮೀನಿನಲ್ಲಿ ಹುಲಿ ದಳಿಗೆ ಬಲಿಯಾದ ಹಸುಗಳು. ಗ್ರಾಮದ ಕೆಂಚನಹಳ್ಳಿ ಗ್ರಾಮದಲ್ಲಿ ಗೋಪಾಲಯ್ಯ ಎಂಬುವರಿಗೆ ಸೇರಿದ ಜಮೀನಿನಲ್ಲಿ ಎರಡು ಹಸುಗಳು ಸಾವಿಗೀಡಾಗಿವೆ. ಸುಮಾರು 2 ಲಕ್ಷ ರೂ. ನಷ್ಟವಾಗಿದೆ. ಬೇಗೂರು ವಲಯದ ಅರಣ್ಯ ಪ್ರದೇಶದಿಂದಚ ಹೊರಬಂದು ಜಮೀನಿನಲ್ಲಿದ್ದ ಹಸುಗಳ ಮೇಲೆ ಏಕಾಏಕಿ ದಾಳಿ ಹಿನ್ನೆಲೆ ಹಸುಗಳು ಸಾವಿಗೀಡಾಗಿವೆ. ಘಟನೆ ಸಂಬಂಧ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ಮಾಡಿದ್ದಾರೆ. “ಕಾಡಂಚಿನ ಗ್ರಾಮಗಳಲ್ಲಿ ಹುಲಿಗಳ ಹಾವಳಿ ಜೋರಾಗಿದೆ, ಅರಣ್ಯಾಧಿಕಾರಿಗಳು ಕೂಡಲೇ ಹುಲಿಗಳನ್ನು ಸೆರೆ ಹಿಡಿಯಬೇಕು. ಗ್ರಾಮಗಳ ರಸ್ತೆಗಳ ಅಕ್ಕ-ಪಕ್ಕ ಬೆಳೆದಿರುವ ಗಿಡ ಗಂಟಿಗಳನ್ನು ತೆರವುಗೊಳಿಸಬೇಕು. ರೈತ ಗೋಪಾಲಯ್ಯ ಅವರಿಗೆ ಸೂಕ್ತ ಪರಿಹಾರ ನೀಡಬೇಕು” ಎಂದು ಗ್ರಾಮ ಪಂಚಾಯಿತಿ ಸದಸ್ಯ ಸೂರ್ಯ ಮನವಿ ಮಾಡಿದ್ದಾರೆ.
