ಬಳ್ಳಾರಿ : ಬದುಕಿ ಬಾಳಬೇಕಾದ ಯುವ ಜೋಡಿಗಳು ಕೆಲ ಕೌಟುಂಬಿಕ ವಿಚಾರದಲ್ಲಿ ಜಗಳವಾಡುವ ಕಾಲ ಇದು. ಕೌಟುಂಬಿಕ ಕಲಹದಲ್ಲಿ ಸಣ್ಣ-ಪುಟ್ಟ ವಿಷಯಗಳಿಗೆ ಕೋಪ-ಮನಸ್ತಾಪ ಮಾಡಿಕೊಂಡು, ಜಗಳ ಮಾಡಿಕೊಂಡು ಸಾವಿನ ದಾಋಇ ಹಿಡಿಯುವ ಕಾಲ ಇಂದಿನ ಕಾಲ.
ಬಳ್ಳಾರಿಯ ಸಿರಗುಪ್ಪ ತಾಲ್ಲೂಕಿನ ದೊಡ್ಡರಾಜ ಕ್ಯಾಂಪ್ ನಿವಾಸಿಗಳಾದ ಶೃತಿ(20) ಮತ್ತು ಅಮರೇಶ್(24), ಇವರಿಬ್ಬರು ಮದುವೆಯಾಗಿ 1ವರ್ಷ 4 ತಿಂಗಳು ಮಾತ್ರ ಕಳೆದಿವೆ. ಮದುವೆ ಆದ ದಿನದಿಂದಲೂ ಸಣ್ಣ-ಪುಟ್ಟ ವಿಚಾರಕ್ಕೆ ಜಗಳವಾಡುತ್ತಿದ್ದರು. ಆದರೆ ದಿನನಿತ್ಯ ಇಂತಹ ಸಾಂಸಾರಿಕ ಜಿಗುಪ್ಸೆಯನ್ನು ತಾಳಲಾರದ ಯುವಜೋಡಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡು ಸಾವಿನ ಮನೆ ಸೇರಿದರು. ಪ್ರಕರಣ ಸಂಬಂಧ ಪೊಲೀಸರು ಪ್ರಾಥಮಿಕ ತನಿಖೆಯನ್ನು ನಡೆಸಿದ ಹಿನ್ನೆಲೆ ಮಾಹಿತಿ ಹೊರ ಬಂದಿದೆ . ಪ್ರಕರಣ ಸಂಬಂಧ ಶಿರಿಗೇರಿ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ಧಾರೆ.
