ಬೆಂಗಳೂರು : ನಗರದಲ್ಲಿ ಇನ್ನು ಮುಂದೆ ಅವಧಿ ಮೀರಿ ಪಟಾಕಿ ಹೊಡೆಯುವವರು ನೂರು ಬಾರಿ ಯೋಚನೆ ಮಾಡಿ . ಇಲ್ಲವಾದರೆ ಕಾನೂನಿನ ಸಂಕಷ್ಟ ಎದುರಿಸಬೇಕಾದೀತು.
ನಗರದಲ್ಲಿ ಈಗಾಗಲೇ ಅಳವಡಿಸಿರುವ ಸಿಸಿ ಕ್ಯಾಮೆರಾಗಳಿಗೆ ಕೃತಕ ಬುದ್ಧಿಮತ್ತೆ ಹೊಸ ತಂತ್ರಜ್ಱನಾಧಾರಿತ ಸಾಫ್ಟ್ವೇರ್ವೊಂದನ್ನು ಪ್ರಯೋಗ ಮಾಡಲಾಗಿದೆ. ಈ ರೀತಿಯ ಪ್ರಯೋಗವು ಯಶಸ್ವಿಯಾಗಿದೆ, ಅಗತ್ಯ ಬಿದ್ದಲ್ಲಿ ಉಳಿದ ಸ್ಥಳಗಳಿಗೆ ವಿಸ್ತರಿಸುವ ಸಾಧ್ಯತೆಯನ್ನು ತಿಳಿಸಿದ್ದಾರೆ. ಇಂತಹ ಹೊಸ ಸಾಫ್ಟ್ವೇರ್ ಪ್ರಯೋಗದಿಂದ ರಸ್ತೆ ಬೀದಿ,ಮನೆಯ ಅಕ್ಕ-ಪಕ್ಕದಲ್ಲಿ ಹಬ್ಬ ಮುಗಿದರೂ ಕೆಲವರು ಹುಟ್ಟುಹಬ್ಬ ಆಚರಣೆ, ವಿವಾಹ ವಾರ್ಷಿಕೋತ್ಸವ ಸೇರಿ ಸಮಾರಂಭಗಳಿಗೆ ಪಟಾಕಿ ಹೊಡೆಯುವುದಲ್ಲದೆ ಅವಧಿ ಮೀರಿ ಪಟಾಕಿ ಸಿಡಿಸುವುದಲ್ಲದೆ ರಾತ್ರಿ 10 ಗಂಟೆ ನಂತರ ಮನೆಯ ಮುಂದೆ ಅಕ್ಕ-ಪಕ್ಕದ ಮನೆಯವರ ಮುಂದೆ ಪಟಾಕಿ ಸಿಡಿಸುವುದರಿಂದ ತೊಂದರೆಯಾಗುತ್ತಿರುವ ಪರಿಣಾಮ ಮನೆಯ ಮಾಲೀಕರು, ವಸತಿ ಪ್ರದೇಶದಲ್ಲಿ ವಾಸಿಸುತ್ತಿರಯುವವರಿಗೆ ತೊಂದರೆ ಯಾಗುತ್ತಿರುವುದರಿಂದ ದೂರು ನೀಡುತ್ತಿದ್ದು, ಹೆಚ್ಚಿನ ದೂರುಗಳು ಬರುತ್ತಿದ್ದ ಕಾರಣ ಕೆಲವು ಭಾಗಗಳಲ್ಲಿ ಪೊಲೀಸರೇ ಖುದ್ದಾಗಿ ಸಮಸ್ಯೆ ಬಗೆಹರಿಸುತ್ತಿದ್ದರು. ಆದರೆ ಇನ್ನು ಮುಂದೆ ಈ ರೀತಿ ನಡೆಯದಂತೆ ಹೊಸ ತಂತ್ರಜ್ಱನದಿಂದ ಸಿಸಿಟಿವಿ ಅಳವಡಿಸುವುದರಿಂದ ಪಟಾಕಿ ಸಿಡಿತವನ್ನು ಪತ್ತೆಹಚ್ಚಲು ಯಶಸ್ವಿಯಾಗಿದೆ.
ಇಂತಹ ಕ್ಯಾಮೆರಾಗಳನ್ನು ಪಟಾಕಿಸಿಡಿಸುವುದನ್ನು ಪತ್ತೆಹಚ್ಚುವ ಕೃತಕ ಬುದ್ಧಿಮತ್ತೆ ಆಧಾರಿತ ಸಾಫ್ಟ್ವೇರ್ ಅನ್ನು ನಗರದ ಕೆಲ ಕ್ಯಾಮೆರಾಗಳಿಗೆ ಅಳವಡಿಸಿದ್ದು, ಶ್ರೀರಾಂಪುರ, ಮಲ್ಲೇಶ್ವರ, ಕೆ.ಆರ್.ಮಾರ್ಕೆಟ್,ಹರಳೂರು, ಮಾರತಹಳ್ಳಿ ಮತ್ತು ಬೆಳ್ಳಂದೂರು ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ 200 ವಿಭಿನ್ನ ಸ್ಥಳಗಳಲ್ಲಿ ಪ್ರಯೋಗವನ್ನು 5 ದಿನಗಳ ಕಾಲ ನಡೆಯಿತು. ಇವು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತವೆ ಮತ್ತು ಪಟಾಕಿ ಸಿಡಿಸುವುದನ್ನು ಸೆರೆಹಿಡಿಯುತ್ತದೆ.
ಇಂತಹ ವಿಭಿನ್ನ ಪ್ರಯೋಗದಿಂದ ಕಳೆದ 5 ದಿನದ ಪ್ರಯೋಗದಲ್ಲಿ ಸುಮಾರು 2,000ಕ್ಕೂ ಹೆಚ್ಚಿನ ಎಚ್ಚರಿಕೆ ಸಂದೇಶಗಳು ದಾಖಲಾಗಿದೆ. ಇದರಿಂದ ಭವಿಷ್ಯದಲ್ಲಿ ಹೆಚ್ಚು ಉಪಯುಕ್ತಕಾರಿಯಾಗಲಿದೆ ಮತ್ತು ವಿವಿಧ ಉದ್ದೇಶಗಳಿಗಾಗಿ ಇದನ್ನು ಬಳಸಬಹುದು. ಇದು ಸಾಕ್ಷ್ಯ ಆಧಾರಿತ ಪೊಲೀಸ್ ವ್ಯವಸ್ಥೆಯಲ್ಲಿ ಒಂದು ಹೊಸ ಮೈಲಿಗಲ್ಲು ಆಗಿದೆ ಎಂದು ಆಡಳಿತ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
