
ಬೆಂಗಳೂರು :ಮೆಟ್ರೋ ನಿಲ್ದಾಣ ಸ್ಪೋಟಿಸುವಂತೆ ಅಪರಿಚಿತನಿಂದ ಬಾಂಬ್ ಬೆದರಿಕೆ ಸಂದೇಶ.ವಿಲ್ಸನ್ ಗಾರ್ಡನ್ ಪೊಲೀಸರಿಂದ ದೂರು ದಾಖಲಿಸಿಕೊಂಡು ತನಿಖೆ ಆರಂಭ.ಬೆಂಗಳೂರಿನ ಬಿಎಂಆರ್ಸಿಎಲ್ ನ ಮೆಟ್ರೋ ನಿಲ್ದಾಣದ ಒಂದನ್ನು ಸ್ಪೋಟಿಸುವುದಾಗಿ ಅಪರಿಚಿತ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಬಂದಿದೆ.
ನವೆಂಬರ್13ರಂದು ರಾತ್ರಿ 11:30ಕ್ಕೆ ಬಾಂಬ್ ಬೆದರಿಕೆ ಸಂದೇಶವನ್ನು ಸ್ವಿಕರಿಸಿದ ನಂತರ ಬೆಂಗಳೂರಿನ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.ಅಪರಿಚಿತ ವ್ಯಕ್ತಿ ತನ್ನ ವಿಚ್ಚೇದಿತ ಪತ್ನಿಗೆ ಮೆಟ್ರೋ ಸಿಬ್ಬಂದಿಯೋರ್ವ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ, ಅಲ್ಲದೆ ನಿಮ್ಮ ಮೆಟ್ರೋ ನಿಲ್ದಾಣಗಳಲ್ಲೊಂದಾದ ಒಂದು ನಿಲ್ದಾಣವನ್ನು ಸ್ಫೋಟಿಸುವುದಾಗಿ ಎಚ್ಚರಿಸಿದ್ದಾನೆ. ಬಿಎಂ್ಆರ್ಸಿಎಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರತೀಶ್ ಥಾಮಸ್ ಇಮೇಲ್ ಅನ್ನು ಪರಿಶೀಲಿಸಿ ನ.14ರಂದು ಪೊಲೀಸರಿಗೆ ತಿಳಿಸಿದರು.ಇದರ ವಿಚಾರವಾಗಿ ಪೊಲೀಸರು ಬೆದರಿಕೆ ಮಾಡಿದವರನ್ನು ಪತ್ತೆಹಚ್ಚುತ್ತಿದ್ದಾರೆ ಮತ್ತು ಬೆದರಿಕೆಯ ಹಿಂದಿನ ಉದ್ದೇಶವನ್ನು ತಿಳಿದುಕೊಳ್ಳು ಪರಿಶೀಲನೆ. ಮಾಡುತ್ತಿದ್ದಾರೆ.
