ಚಿತ್ರದುರ್ಗ: ತಾಂತ್ರಿಕ ತೊಂದರೆ ಉಂಟಾದ ಹಿನ್ನೆಲೆ ಖಾಸಗಿ ಕಟ್ಟಡದಲ್ಲಿ ವಿದ್ಯುತ್ ಉಪಕರಣಗಳು ಹೊತ್ತಿ ಉರಿದ ಘಟನೆ ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯ ಪ್ರಗತಿ ಆಸ್ಪತ್ರೆ ಮುಂಭಾಗದ ಕಟ್ಟಡದಲ್ಲಿ ನಡೆದಿದೆ. ವಿದ್ಯುತ್ ಪ್ರವಾಹದ ಸಂದರ್ಭದಲ್ಲಿ ವ್ಯತ್ಯಾಸ ಕಂಡಿದ್ದು, ಮೋಟಾರ್ ಬೋರ್ಡ್ನಲ್ಲಿ ಕಾಣಿಸಿಕೊಂಡ ಬೆಂಕಿ, ನೋಡ ನೋಡುತ್ತಿದ್ದಂತೆ ಹೆಚ್ಚಾಯಿತು. ಜನನಿಬಿಡ ಪ್ರದೇಶವಾದ ಕಾರಣಂ ಅಕ್ಕ ಪಕ್ಕದ ಸ್ಥಳ, ಜನರಿಗೆ ಯಾವುದೇ ಹಾನಿಯಾಗಿಲ್ಲ. ಖಾಸಗಿ ಕಟ್ಟಡ ಮಾಲೀಕರ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದ ಕಾರಣ ಈ ರೀತಿಯ ಘಟನೆ ಸಂಭವಿಸಿದೆ . ಅಗ್ನಿಶಾಮಕ ಸಿಬ್ಬಂಧಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
