
ಗದಗ: ಮೆಕ್ಕೆ ಜೋಳ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸುವಂತೆ ಗದಗದ ಲಕಲ್ಷ್ಮೇಶ್ವರ ಪಟ್ಟಣದಲ್ಲಿ ರೈತಪರ ಸಂಘಟನೆಯಿಂದ ಹೋರಾಟ ನಡೆಸಿದರು.
ಮೆಕ್ಕೆಜೋಳದ ಖರೀದಿ ಕೇಂದ್ರ ತೆರೆಯುವಂತೆ ರೈತಪರ ಹೋರಾಟಗಾರರಿಂದ ಕಳೆದ ನಾಲ್ಕು ದಿನಗಳಿಂದ ರೈತಪರ ಸಂಘಟನೆಯಿಂದ ಉಪವಾಸ ಸತ್ಯಾಗ್ರಹ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟಿಲ್ ಸ್ಥಳಕ್ಕೆ ಬಂದು ತಮ್ಮ ಜೊತೆ ಮಾತನಾಡಬೇಕೆಂದು ಪಟ್ಟು ಹಿಡಿದರು. ರೈತರ ಸಮಸ್ಯೆ ಕುರಿತು ಸ್ಪಂದಿಸದ ಜಿಲ್ಲಾ ಉಸ್ತುವಾರಿ,ಸಚಿವರ ವಿರುದ್ದ ಆಕ್ರೋಶ ಹೊರ ಹಾಕಿ ರಸ್ತೆ ತಡೆದು ಜಿಲ್ಲಾಡಳಿತದ ವಿರುದ್ಧ ರೈತರು ಕೆಂಡಾಮಂಡಲವಾಗಿದ್ದಾರೆ. ಸ್ಪಂದಿಸದೇ ಇದ್ದಲ್ಲಿ ನಾಳೆ ಉಗ್ರವಾದ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.
