ಬಳ್ಳಾರಿ: ಹೋಂ ವರ್ಕ್ ನೆಪದಲ್ಲಿ ವಿದ್ಯಾರ್ಥಿಗೆ ಶಿಕ್ಷಕಿ ಥಳಿಸಿದ ಘಟನೆ ಬಳ್ಳಾರಿಯ ಕಂಪ್ಲಿ ನಗರದಲ್ಲಿ ನಡೆದಿದೆ. ಮೂರನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗೆ ಬೋಧನೆ ಮಾಡುವ ವೇಳೆ ಮನೆ ಕೆಲಸ (ಹೋಂ ವರ್ಕ್) ಮಾಡಿಕೊಂಡು ಬಂದಿರದ ಕಾರಣ ಶಿಕ್ಷಕಿ ಅಕ್ಕಮಹಾದೇವಿ ಎಂಬ ಶಿಕ್ಷಕಿಯಿಂದ ಮಹ್ಮದ್ ಅತೀಕ್ ಎಂಬ ವಿದ್ಯಾರ್ಥಿಯ ಕೈ-ಕಾಲುಗಳ ಮೇಲೆ ಬಾಸುಂಡೆ ಬರುವವರೆಗೆ ಥಳಿಸಿದ್ದಾರೆ. ವಿಷಯ ತಿಳಿದ ಪೋಷಕರು ಶಾಲೆಗೆ ಬಂದು ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಮರುಕಳಿಸಿದರೆ ದೂರು ನೀಡುವುದಾಗಿ ಪೋಷಕರು ಶಾಲಾ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.
