ಬಿಹಾರ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಭರ್ಜರಿ ಜಯ ಸಾಧಿಸಿದ ಬಳಿಕ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಇಂದು ದಾಖಲೆಯ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇಂದು ಐತಿಹಾಸಿಕ ಗಾಂಧಿ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆಗಳು ನಡೆಸಿದ್ದು,ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಲವರು ಉನ್ನತ ಎನ್ಡಿಎ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಬಿಹಾರದ ಸಚಿವ ಸಂಪುಟದಲ್ಲಿ ಬಿಜೆಪಿಯ 16 ಸಚಿವರು ಮತ್ತು ಜೆಡಿಯುನ 14 ಸಚಿವರು ಸೇರುವ ನಿರೀಕ್ಷೆಯಿದೆ.ಬಿಹಾರದಲ್ಲಿ ನೂತನವಾಗಿ ರಚನೆಗೊಂಡ ಸರ್ಕಾರ ಎನ್ಡಿಎ ಮೈತ್ರಿಕೂಟ ತನ್ನ ಸಮತೋಲನವನ್ನು ಕಾಪಾಡಿಕೊಳ್ಳಲು ಹೊಸ ತಂತ್ರವನ್ನು ರೂಪಿಸಿದೆ. ಆರು ಶಾಸಕರಿಗೆ ಒಂದು ಸಚಿವ ಸ್ಥಾನದ ಸೂತ್ರವನ್ನು ಅಳವಡಿಸಿಕೊಮಡಿದ್ದು, ಮೈತ್ರಿಕೂಟದ 20ಕ್ಕೂ ಹೆಚ್ಚು ಸಚಿವರು ನವೆಂಬರ್ 20ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
