

ಚಿತ್ರದುರ್ಗ : ಆಟೋದಲ್ಲಿ ಹೊರಟವರನ್ನು ಕಳ್ಳರೆಂದು ಭಾವಿಸಿ ಥಳಿಸಿದ ಗ್ರಾಮಸ್ಥರು. ಚಿತ್ರದುರ್ಗದ ದ್ಯಾಮೇನಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ. ರಾಕಿ ಎಂಬವನ ಪತ್ನಿಯನ್ನು ಊರಿಗೆ ಬಿಡಲು ತೆರಳಿದ್ದ ವೇಳೆ ಜೊತೆಯಲ್ಲಿ ಕಿರಣ್ ಮತ್ತು ಚಂದ್ರಶೇಖರ್ ಇಬ್ಬರನ್ನು ಕಳ್ಳರೆಂದು ಭಾವಿಸಿ ಗ್ರಾಮಸ್ಥರು ಥಳಿಸಿದ್ದಾರೆ. ಇತ್ತ ಗ್ರಾಮಸ್ಥರಿಂದ ಏಟು ಬೀಳ್ತಿದ್ದಂತೆ ಕಾಲು ಕಿತ್ತು ಪರಾರಿಯಾದ ರಾಕಿ. ಗಾಯಾಳುಗಳನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಘಟನೆ ಸಂಬಂಧ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ಧಾರೆ.
