ನವದೆಹಲಿ/ಬೆಂಗಳೂರು: ಉದ್ಯೋಗದ ಆಸೆಗೆ ಬಿದ್ದು ಮ್ಯಾನ್ಮಾರ್ನಲ್ಲಿ ವಂಚಕರ ಬಲೆಯಲ್ಲಿ ಸಿಲುಕಿಕೊಂಡಿದ್ದ 25 ಮಂದಿ ಕನ್ನಡಿಗರು ಸೇರಿ ಒಟ್ಟು 125 ಮಂದಿ ಭಾರತೀಯರನ್ನು ರಕ್ಷಣೆ ಮಾಡಿ ಥೈಲ್ಯಾಂಡ್ನಿಂದ ಭಾರತಕ್ಕೆ ಕರೆತಂದರು. ಈ ವರ್ಷದ ಮಾರ್ಚ್ನಿಂದ ಮಯನ್ಮಾರ್ನ ಕಳ್ಳಸಾಗಾಣೆ ಕೇಂದ್ರಗಳಿಂದ ಒಟ್ಟು 125 ಭಾರತೀಯರನ್ನು ಥೈಲ್ಯಾಂಡ್ ಮೂಲದ ದೇಶಕ್ಕೆ ಮರಳಿ ಕರೆತರಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ಮಾಹಿತಿ ತಿಳಿಸಿದೆ.
‘ಕಳ್ಳ ಸಾಗಾಣಿಕೆ ಕೇಂದ್ರಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ಕರೆತರುವ ಭಾರತ ಸರ್ಕಾರ ದ ಪ್ರಯತ್ನಗಳ ಭಾಗವಾಗಿ, ಬ್ಯಾಂಕಾಕ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮತ್ತು ಥೈಲ್ಯಾಂಡ್ನ ಚಿಯಾಂಗ್ ಮಾಯ್ ಪ್ರಾಂತ್ಯದಲ್ಲಿರುವ ಭಾರತೀಯ ದೂತವಾಸವು ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಥಾಯ್ ಸರ್ಕಾರ ಮತ್ತು ಟೆಕ್ ಪ್ರಾಂತ್ಯದ ವಿವಿಧ ಸಂಸ್ಥೆಗಳೊಟ್ಟಿಗೆ ನಿಕಟ ಸಮನ್ವಯದೊಂದಿಗೆ ಕೆಲಸ ಮಾಡುತ್ತಿದೆ.
