ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಸ್ಥಳೀಯನ ಮೇಲೆ ಕೇರಳ ಬಾಯ್ಸ್ ಹಲ್ಲೆ ಮಾಡಿರುವ ಘಟನೆ ಅಶೋಕ ನಗರದ ಬಳಿ ನಡೆದಿದೆ.ಅಶೋಕ ನಗರದ ಫಿಲೋಮಿನಾ ಆಸ್ಪತ್ರೆಯ ಹಿಂಭಾಗದ ನಿವಾಸಿ ಆಜಾದ್ ಮನೆ ಬಳಿ ಯುವತಿಯರ ಜೊತೆ ಕೇರಳ ಯುವಕರ ಗುಂಪೊಂದು ಕುಳಿತಿದ್ದು, ಯುವಕ ಆಜಾದ್ ಇಲ್ಲಿ ಕುಳಿತುಕೊಳ್ಳಬೇಡಿ ಎಂದು ಪ್ರಶ್ನಿಸಿದ್ದಕ್ಕೆ ನೀವ್ಯಾರು,ಕೇಳೋದಕ್ಕೆ , ನಿಂಗೇನು ತೊಂದರೆ ಎಂದು ಪ್ರತ್ಯುತ್ತರ ನೀಡಿದ ಕೇರಳ ಹುಡುಗರನ್ನು, ನಿಮ್ಮನ್ನು ನೋಡಿದರೆ ಭಯ ಆಗುತ್ತದೆ, ಇಲ್ಲಿಂದ ಹೊರಟು ಹೋಗಿ ಎಂಉ ಹೇಳಿದ್ದಕ್ಕೆ ಮಾತಿಗೆ ಮಾತು ಬೆಳೆದು ವ್ಯಕ್ತಿಯನ್ನು ಮನಸೋಯಿಚ್ಛೆ ಹಲ್ಲೆ ಮಾಡಿ ಥಳಿಸಿದ್ಧಾರೆ. ಈ ಆರೋಪದಡಿ ಗಾಯಾಳು ಯುವಕರ ವಿರುದ್ಧ ಅಶೋಕ ನಗರದ ಪೊಲೀಸ್ರಿಂದ ಹಲ್ಲೆ ಮಾಡಿದ ಅಪರಾಧಿಗಳನ್ನು ವಿಚಾರಣೆ ನಡೆಸಿ ಮುವರನ್ನು ಬಂಧನ ಮಾಡಿದ್ದಾರೆ. ಬೆಸಿಲ್ ವರ್ಗೀಸ್, ತರಾಸ್ ರಾಜಿ,ಸಂದೀಪ್ ಮಹಾದೇವ್ ಬಂಧಿತ ಅರೋಪಿಗಳು
