ಬೆಂಗಳೂರು : ಆರ್.ಅಶೋಕ್ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧದ ಮುಂದೆ ಕುಳಿತು ಗುಂಡಿವೀರ ಎಂಬ ಪೋಸ್ಟರ್ ಹಿಡಿದು ಗುಂಡಿ ಮುಚ್ಚದ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಂಡಿ ಬಿದ್ದ ರಸ್ತೆ ಬಳಿ ಕುಳಿತು ಚಿಕ್ಕ ಹಡಗನ್ನು ತಯಾರಿಸಿ ಗುಂಡಿಯಲ್ಲಕಿ ನೀರು ಬಿಟ್ಟು, ದೋಣಿ ಬಿಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೈ ಪಡೆಯಲ್ಲಿ ಹೆಚ್ಚಾದ ನಾಯಕತ್ವ ಬದಲಾವಣೆ ಚರ್ಚೆ, ಸಿಎಂ-ಡಿಸಿಎಂ ಬಣಗಳಿಂದ ಹೈಕಮಾಂಡ್ ನಾಯಕರ ಭೇಟಿಗೆ ಕಸರತ್ತು ಮಾಡುವ ಪಕ್ಷಗಳು, ಸದ್ಯ ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಅವರು ಆಗಮಿಸುತ್ತಿದ್ದಂತೆ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯೋ ಸಾಧ್ಯತೆಗಳಿವೆ. ಇನ್ನು ಪವರ್ ಸೆಂಟರ್ ಆಗಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಿವಾಸದ ಬಳಿ ಖರ್ಗೆಯರನ್ನು ಭೇಟಿ ಯಾಗಿದ್ದ ಸಿಎಂ ಸಿದ್ದರಾಮಯ್ಯ, ಸಚಿವರು ಮತ್ತು ಶಾಸಕರು ನಾಯಕತ್ವ ಬದಲಾವಣೆಗೆ ಸಂಬಂಧಪಟ್ಟ ತಮ್ಮದೇ ಅಭಿಪ್ರಾಯಗಳನ್ನು ತಿಳಿಸಿದ ಕೈ ನಾಯಕರು. ಎಲ್ಲರ ಅಭಿಪ್ರಾಯಗಳನ್ನು ಕಲೆಹಾಕಿಕೊಂಡು ದೆಹಲಿಗೆ ಹಾರಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮಂಗಳವಾರ ಅಥವಾ ಬುಧವಾರ ದೆಹಲಿಯಲ್ಲಿ ರಾಹುಲ್ ಗಾಂಧಿ ಜೊತೆ ಚರ್ಚಿಸಿ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಬದಲಾವಣೆ ತರುವ ಸಾಧ್ಯತೆಗಳಿವೆ ಎನ್ನುವ ಮಾಹಿತಿ ಹರಿದಾಡುತ್ತಿದೆ.
