ಚಿತ್ರದುರ್ಗ: ಚಿತ್ರದುರ್ಗದಲ್ಲಿ ಸುಮಾರು ರಾತ್ರಿ 8:30ರ ವೇಳೆಯಲ್ಲಿ ತಿಪ್ಪೇ ಸ್ವಾಮಿ ಎಂಬ ಆಟೋ ಚಾಲಕನಿಂದ ನಿಯಮ ಮೀರಿ ಚಾಲನೆ ಮಾಡಿದ್ದು, ಕುಡಿದ ಮತ್ತಿನಲ್ಲಿ ಆಟೋ ಚಾಲನೆ ಮತ್ತು ನಿಯಮ ಉಲ್ಲಂಘನೆ ಮಾಡುವುದಲ್ಲದೆ ಸರಿಯಾದ ರೀತಿಯಲ್ಲಿ ಮಾತನಾಡದ ಚಾಲಕ. ಸಂಚಾರ ಪೊಲೀಸ್ ಕೇಳಿದ ಪ್ರಶ್ನೆಗೆ ಉಢಾಫೆ ಉತ್ತರಗಳನನ್ಉ ನೀಡುತ್ತಿದ್ದ ಚಾಲಕನ ಮೇಲೆ ಡ್ರಂಕ್ ಅಂಡ್ ಡ್ರೈವ್ ಪ್ರಕರಣ ದಾಖಲಿಸಲು ಮುಂದಾದ ಪೊಲೀಸರು, ಪೊಲೀಸ್ ಸಿಬ್ಬಂಧಿ ಮತ್ತು ಚಾಲಕನ ನಡುವೆ ಮಾತಿನ ಚಕಮಕಿ ನಡೆದು, ಚಾಲಕ ಆಟೋ ಬಿಟ್ಟು, ಒಂದು ಗಂಟೆ ನಂತರ ಗಾಂಧಿ ವೃತ್ತಕ್ಕೆ ಬಂದು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಘಟನೆಯಲ್ಲಿ ಶೇ.50%ರಷ್ಟು ದೇಹ ಸುಟ್ಟಿದ್ದು, ರಕ್ಷಿಸಿ ಚಿತ್ರದುರ್ಗದ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನೀಡಿ ದಾವಣಗೆರೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
