ಚಳ್ಳಕೆರೆ : ಚಿತ್ರದುರ್ಗದ ಚಳ್ಳಕೆರೆ ಸೇರಿ ಹಲವು ಸ್ಥಳಗಳಲ್ಲಿ ಟೊಮ್ಯಾಟೋ ಬೆಲೆ ಪಾತಾಳಕ್ಕೆ ಕುಸಿತವಾದ ಹಿನ್ನೆಲೆ ಬೆಳೆಗಾರರಲ್ಲಿ ನಿರಾಸೆಯನ್ನುಂಟು ಮಾಡಿದೆ. ಇದೀಗ ಮಾರುಕಟ್ಟೆಯಲ್ಲಿ ದಿಢೀರ್ ಟೊಮ್ಯಾಟೋ ಬೆಲೆ ಏರಿಕೆ ಕಂಡಿದ್ದು ಟೊಮ್ಯಾಟೋ ಬೆಳೆಗಾರರಲ್ಲಿ ಸಂತಸ ಮೂಡಿದೆ. ಕೆಲ ದಿನಗಳ ಹಿಂದೆ ಟೊಮ್ಯಾಟೋ ಬೆಳೆ ಸಂಪೂರ್ನವಾಗಿ ಕುಸಿತ ಕಂಡಿದ್ದು, ರೈತರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ತಾವು ಬಂಡವಾಳ ಹಾಕಿ ಬೆಳೆದ ಫಸಲು ಕೈಗೆ ಬಾರದಾಯಿತೆಂದು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲ ರೈತರು ತಮ್ಮ ಜಮೀನಿನಲ್ಲೇ ಕೊಳೆಯಲು ಬಿಟ್ಟಿದ್ದರು. ಇದರ ಬೆನ್ನಲ್ಲೇ ಜಿಲ್ಲೆಯಲ್ಲಿ ಟೊಮ್ಯಾಟೋ 1 ಬಾಕ್ಸ್ಗೆ 500ರಿಂದ 700 ರೂಪಾಯಿ ಏರಿಕೆ ಕಂಡಿದ್ದು, ಟೊಮ್ಯಾಟೋ ಬೆಳೆಗಾರರಿಗೆ ತುಸು ಸಂತಸ ತಂದಿದೆ, ಗ್ರಾಹಕರಿಗೆ ಹೊರೆಯಾಗಿದೆ.
