ಅಯೋಧ್ಯ : ಪ್ರಸಿದ್ಧ ರಾಮಜನ್ಮ ಭೂಮಿಯಾದ ಅಯೋಧ್ಯ ಶ್ರೀ ರಾಮಮಂದಿರದಲ್ಲಿ ಇಂದು ಅಂದರೆ ಡಿಸೆಂಬರ್. 25ರಂದು ಧ್ವಜಾರೋಹಣ ಕಾರ್ಯಕ್ರಮ ಇಂದು ಬೆಳಗ್ಗೆ 11:52 ರಿಂದ 12:35ರ ಶುಭ ಮುಹೂರ್ತದಲ್ಲಿ ಶ್ರೀ ರಾಮಮಂದಿರದ ಶಿಖರದಲ್ಲಿ ಸುಮಾರು 191 ಅಡಿ ಎತ್ತರ ಮತ್ತು 22 ಅಡಿಗಳಷ್ಟು ಕೇಸರಿಯ ತ್ರಿಕೋನಾಕಾರದ ಧ್ವಜವನ್ನು ಹಾರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಅಯೋಧ್ಯ, ಕಾಶಿ, ಮತ್ತು ದಕ್ಷಿಣ ಭಾರತದಿಂದ 108 ಆಚಾರ್ಯರು ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಿದ್ದಾರೆ . ಧ್ವಜವು ಸೂರ್ಯನ ಚಿನ್ಹೆ ಹೊಂದಿದ್ದು, ಇದು ಶಕ್ತಿ, ದಿವ್ಯ ಪ್ರಕಾಶ, ನೀತಿಯಬ ಸಂಕೇತವಾಗಿದೆ.
ರಾಮಮಂದಿರದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ಮೋದಿಯವರ ಜೊತೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇಂದು ರಾಮಮಂದಿರ ಕೇಸರಿ ಧ್ವಜಾರೋಹಣ ಕಾರ್ಯಕ್ರಮದ ಅಂಗವಾಗಿ ಇಂದು ಸಾರ್ವಜನಿಕ ಪ್ರವೇಶ ನಿಷೇಧ ಮಾಡಲಾಗಿದೆ. ಮಧ್ಯಾಹ್ನ 2:30ರ ನಂತರ ದರ್ಶನ ಪುನರ್ ಆರಂಭಿಸಲಾಗುತ್ತೆ
