
ಚಾಮರಾಜನಗರ: ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಹುಲಿ ದಾಳಿಗೆ ಮೃತಪಟ್ಟ ಮಹಿಳೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗೂಡ್ಲೂರು ತಾಲ್ಲೂಕಿನ ಮಾವನಹಳ್ಳ ಗ್ರಾಮದ ನಾಗಿಯಮ್ಮ (61) ಮೃತಪಟ್ಟಿದ್ದಾರೆ. ಮೇಕೆಗಳನ್ನು ಮೇಯಿಸುವಾಗ ಏಕಾ ಏಕಿ ಮಹಿಳೆಯನ್ನು ಹೊತ್ತೊಯ್ದಿದೆ. ಸುಮಾರು 100 ಮೀಟರ್ ದೂರದ ಹಳ್ಳಕ್ಕೆ ಎಳೆದೊಯ್ದಿದ್ದ, ಮಹಿಳೇಯ ದೇಹದ ರುಂಡ ಮತ್ತು ದೇಹ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
