ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ರಾಜಕೀಯದಲ್ಲಿ ಅಧಿಕಾರ ಹಂಚಿಕೆ ಚರ್ಚೆ ಬಗ್ಗೆ ಡಿಕೆಶಿ ತೀವ್ರ ಮಾರ್ಮಿಕ ನುಡಿಯಾಡಿದ್ದಾರೆ.ಕೊಟ್ಟ ಮಾತು ಉಳಿಸಿಕೊಳ್ಳುವುದೇ ದೊಡ್ಡ ಶಕ್ತಿ ಎಂದು ಪೋಸ್ಟ್ ಮಾಡಿದ್ದು, ಇದರ ಬಗ್ಗೆ ಹಲವಾರು ಕಾಮೆಂಟ್ ವ್ಯಕ್ತವಾಗಿದೆ.
ನಿನ್ನೆ ಸಾಮಾಜಿಕ ಮಾಧ್ಯಮದಲ್ಲಿ ಅಧಿಕಾರ ಹಂಚಿಕೆ ವಿಚಾರವಾಗಿ ಎಕ್ಸ್ ಖಾತೆಯಲ್ಲಿ ಮಾರ್ಮಿಕ ಸಂದೇಶವನ್ನು ಹಾಕುವ ಮೂಲಕ ರಾಜಕೀಯ ಗಮನ ಸೇಳೆದಿದ್ದಾರೆ. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು ಪ್ಲೀಸ್ ವೈಟ್ ಎಂಬ ಸಂದೇಶವನ್ನು ಕಳುಹಿಸಿದ್ದಾರೆ. ಈ ಸಂದೇಶಗಳು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಡಿಕೆಶಿ ಟ್ವೀಟ್ ಸಂದೇಶದಲ್ಲೇನಿದೆ ?
ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ವಿಶ್ವದಲ್ಲಿ ದೊಡ್ಡ ಶಕ್ತಿ ಎಂದು ಡಿಕೆ ಶಿವಕುಮಾರ್ ಬರೆದುಕೊಂಡಿದ್ದಾರೆ. ವರ್ಡ್ ಪವರ್ ಇಸ್ ವರ್ಲ್ಡ್ಪ ಪವರ್. ಅದು ನ್ಯಾಯಾಧಿಶರಾಗಲಿ, ಅಧ್ಯಕ್ಷರಾಗಲಿ ಅಥವಾ ನಾನೂ, ಯಾರೇ ಆಗಲಿ ಆಡಿದ ಮಾತಿನಂತೆ ನಡೆದುಕೊಳ್ಳಬೇಕು ಎಂಧು ಎಕ್ಸ್ನಲ್ಲಿ ಸಂದೇಶವನ್ನು ತಿಳಿಸಿದ್ದಾರೆ.
