ಬೆಂಗಳೂರು : ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ಮೊದಲ ಬಾರಿಗೆ ಫಲಪುಷ್ಪ ಪ್ರದರ್ಷನ ಆಯೋಜಿಸಲಾಗಿದೆ. ನ.27ರಿಂದ 11ದಿನಗಳವರೆಗೆ ನಡೆಯಲಿರುವ ಪುಷ್ಪ ಪ್ರದರ್ಶನದಲ್ಲಿ ಬರ್ಣಣ-ಬಣ್ಣದ ಹೂ ಹಣ್ಣು, ತರಕಾರಿಗಳಿಂದ ಮೂಡಿಬಂದಿರುವ ಪ್ರಾಣಿ, ಪಕ್ಷಿಗಳ ಕಲಾಕೃತಿ ಮತ್ತು ವಿಶೇಷವೆಂದರೆ ಮೊದಲ ಬಾರಿಗೆ ಭಾರತೀಯ ಸೇನಾ ಶಸ್ತ್ರಾಸ್ತ್ರಗಳು ಮತ್ತು ಯುದ್ಧ ವಾಹನಗಳ ಕಲಾಕೃತಿಗಳನ್ನು ರಚಿಸಲಾಗಿದೆ.
25ಸಾವಿರಕ್ಕೂ ಹೆಚ್ಚಿನ ಹೂ ಕುಂಡಗಳಿಂದ ರಚಿಸಲಾಗಿದೆ, ವಿವಿಧ ತರೆಹವಾರಿ ವಿದೇಶಿ ಹೂಗಳನ್ನು ಬಳಸಿರುವುದರಿಂದ ಈ ಬಾರಿ ಹೆಚ್ಚಿನ ಮೆರಗನ್ನು ತಂದಿದೆ.
ಪುಷ್ಪ ಪ್ರದರ್ಶನದ ಜೊತೆಗೆ ಶಾಸ್ತ್ರೀಯ ಸಂಗೀತ, ನೃತ್ಯ ಪ್ರದರ್ಶನ, ಸಂಗೀತ ಸಂಜೆ ಕಾರ್ಯಕ್ರಮ ಎಲ್ಲವೂ ಇರಲಿದ್ದು, ಹೆಚ್ಚಿನ ಮೆರಗು ಬಂದಂತಾಗಿದೆ.
ಕಬ್ಬನ್ ಪಾರ್ಕ್ ಫ್ಲವರ್ ಶೋಗೆ ಟಿಕೆಟ್ ನಿಗಧಿಪಡಿಸಿದ್ದು, 6 ವರ್ಷದ ಮಕ್ಕಳು ಸೇರಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಮತ್ತು ಖಾಸಗಿ ಶಾಲಾ ಮಕ್ಕಳಿಗೆ 10 ರೂಪಾಯಿ ದರ ನಿಗಧಿಸಿದ್ದು, ಸಾರ್ವಜನಿಕರಿಗೆ 30 ರೂಪಾಯಿ ಟಿಕೆಟ್ ನಿಗಧಿಪಡಿಸಲಾಗಿದೆ. ಒಟ್ಟು 38 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಕಬ್ಬನ್ ಪಾರ್ಕ್ ಫ್ಲವರ್ ಶೋ ನೋಡಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ವೀಕ್ಷಿಸುತ್ತಿದ್ದಾರೆ.
