
ದೆಹಲಿ : ಸುಮಾರು 30ಕ್ಕೂ ಹೆಚ್ಚಿನ ಪ್ರಯಾಣಿಕರನಬ್ನು ಹೊತ್ತು ಸಾಗುತ್ತಿದ್ದ ದೆಹಲಿ-ವಾರಣಾಸಿ ಸ್ಲೀಪರ್ ಬಸ್ ನೋಡ ನೊಡುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಕಾನ್ಪುರದ ಎನ್ಹೆಚ್19ರ ರಾಮದೇವಿ ರಸ್ತೆ ಬಳಿ ನಡೆದಿದೆ. ಬೆಂಕಿ ಕಾಣಿಸಿಕೊಂಡು ಉರಿಯುತ್ತಿದ್ದಂತೆ ಪ್ರಯಾಣಿಕರು ತಮ್ಮ ಜೀವ ಉಳಿಸಿಕೊಳ್ಳು ಬಸ್ನಿಂದ ಇಳಿದು ಕಕ್ಕಾ-ಬಿಕ್ಕಿಯಾಗಿ ಓಡತೊಡಗಿದರು. ದುರಂತದಲ್ಲಿ ಕೆಲ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ.
ದೆಹಲಿಯಿಂದ ಹೊರಟ ಬಸ್ ವಾರಣಾಸಿ ಕಡೆಗೆ ಹೋಗುತ್ತಿದ್ದ ವೇಳೆ ಮೇಲಿನ ಡೆಕ್ನಲ್ಲಿ ಇರಿಸಲಾಗಿದ್ದ ವಸ್ತುಗಳಲ್ಲಿ ಹಠಾತ್ ಹೊಗೆ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಳ್ಳಲು ಆರಂಭಿಸಿತು. ಚಾಲಕನ ಸಮಯಪ್ರಜ್ನೆಯಿಂದ ವಾಹನವನ್ನು ಪಕ್ಕದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಕುಡಲೆ ಕೆಳಗಿಳಿಸಿ ಅನಾಹುತವನ್ನು ತಪ್ಪಿಸಿದನು. ಬೆಂಕಿ ದುರಂತದಲ್ಲಿ ಹಲವು ಪ್ರಯಾಣಿಕರು ತಮ್ಮ ದುಬಾರಿ ಮೊತ್ತದ ವಸ್ತುಗಳು ಸೇರಿ ಹಣ ಸುಟ್ಟುಹೊಗಿದೆ ಎಂದು ಅಳಲನ್ನು ತೋಡಿಕೊಂಡರು. ಇನ್ನು ಘಟನೆ ಕುರಿತು ಮಾಹಿತಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು.
