ಬೆಳಗಾವಿ: ಬೆಲ್ಲದ ಪುಡಿ ಕಾರ್ಖಾನೆಯಿಂದ ಹೊರ ಬರುವ ಶಬ್ದ ಮತ್ತು ಧೂಳಿನಿಂದ ಸಮಸ್ಯೆ ಎದುರಿಸುತ್ತಿರುವ ರಾಯಲ್ ಇಂಡಿಯನ್ ಅಕಾಡೆಮಿ ಖಾಸಗಿ ಶಾಲೆಯ ವಿದ್ಯಾರ್ಥಿಗಳು ರಸ್ತೆಯಲ್ಲಿ ಧರಣಿ ಕುಳಿತು ಕಾರ್ಖಾನೆ ವಿರುದ್ಧ ಪ್ರತಿಭಟನೆ ನಡಸಿದರು.
ಕಳೆದ ಕೆಲ ತಿಂಗಳುಗಳಿಂದ ಶಾಲೆಯ ದಾರಿಯನ್ನು ಬಂದ್ ಮಾಡಿ ಬೆಲ್ಲದ ಪುಡಿ ತಯಾರು ಮಾಡುತ್ತಿರುವ ಕಾರ್ಖಾನೆಯಿಂದ ಹೊರ ಬರುವ ಶಬ್ದ ಮತ್ತು ಧೂಳಿನಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ, ಕೂಡಲೆ ಕಾರ್ಖಾನೆಯನ್ನು ಬಂದ್ ಮಾಡುವಂತೆ ಕಾರ್ಖಾನೆ ವಿರುದ್ಧ ವಿದ್ಯಾರ್ಥಗಳು ಮತ್ತು ಪೋಷಕರು ಪ್ರತಿಭಟನೆ ಮಾಡುತ್ತಿದ್ಧಾರೆ. ಪ್ರತಿಭಟನಾ ಸ್ಥಳಕ್ಕೆ ರಾಯಭಾಗದ ತಹಶೀಲ್ದಾರ್ ಮಹಾದೇವ ಸನಮೂರಿ ಪಿಎಸ್ಐ ಶಿವರಾಜ ಧರಿಗೋಣ ಭೇಟಿ ನೀಡಿ ರಸ್ತೆ ಸಂಚಾರವನ್ನು ಸುಗಮಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟರು.

