ರಾಯಚೂರು:ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕುತ್ತಿರುವ ಬಾರುಗಳು. ಸಿಎಲ್2, ಸಿಎಲ್9 ಲೈಸೆನ್ಸ್ ಹೊಂದಿರುವ ಬಾರುಗಳಿಂದ ಎಮ್ಆರ್ಪಿಗಿಂತ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಮದ್ಯ ವ್ಯಾಪಾರಿಗಳು.
ರಾಯಚೂರಿನಲ್ಲಿ ಮದ್ಯ ಖರೀದಿಸಲು ಹೋದ ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕುತ್ತಿರುವ ಬಾರ್ ಮಾಲೀಕರು. ಮದ್ಯ ಮಾರಾಟ ಮಾಡಲು ಸರ್ಕಾರದಿಂದ ಕೆಲ ಮಾನದಂಡಗಳನ್ನು ಜಾರಿ ಮಾಡಿದ್ದರು. ಆದರೆ ಇಲ್ಲಿ ಅದೆಲ್ಲವನ್ನು ಗಾಳಿಗೆ ತೂರಿ ಇಷ್ಟಬಂದಂತೆ ಎಮ್ಆರ್ಪಿ ಬೆಲೆಗಿಂತ ಹೆಚ್ಚುವರಿ ದರ ನಿಗದಪಡಿಸಿ ಮಾರಾಟ ಮಾಡುತ್ತಿರುವ ಮಾಲಿಕರು. ಮದ್ಯಪ್ರಿಯರ ಜೇಬಿಗೆ ಹಾಡು ಹಗಲೇ ಕತ್ತರಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಸಿಎಲ್ 2 ನಿಯಮದ ಪ್ರಕಾರ ಬಾರ್ ಅಂಡ್ ರೆಸ್ಟೋರೆಂಟ್ಗಳಲ್ಲಿ ಕುಡಿಯಲು, ತಿನ್ನಲು ಸುಕ್ತ ವ್ಯವಸ್ಥೆ, ಸ್ವಚ್ಛತೆಯನ್ನು ಕಲ್ಲಿಸಬೇಕು ಎಂದು ಮಾನದಂಡಗಳನ್ನು ಜಾರಿಮಾಡಿದೆ. ಆದರೆ ಇಲ್ಲಿ ಆ ಮಾನದಂಡಗಳನ್ನೆಲ್ಲ ಗಾಳಿಗೆ ತೂರಿ ಮದ್ಯ ಮಾರಾಟ ಮಾಡುತ್ತಿರುವ ಮಾಲೀಕರು. ಮದ್ಯ ಮಾರಾಟಗಾರರು ಚಿಕ್ಕ ಚಿಕ್ಕ ಕಿರಾ ಣಿ ಅಂಗಡಿಗಳಲ್ಲಿಯೂ ಮಾರಾಟ ಮಾಡಲು ಟಾರ್ಗೆಟ್ ನೆಪದಲ್ಲಿ ನಿರಂತರವಾಗಿ ಮದ್ಯವನ್ನು ಸರಬರಾಜು ಮಾಡುತ್ತಿದ್ದಾರೆ. ಅಬಕಾರಿ ಇಲಾಖಾ ಅಧಿಕಾರಿಗಳು ಅಲ್ಲೊಂದು ಇಲ್ಲೊಂದು ದಾಳಿ ಮಾಡಿ ಪ್ರಕರಣವನ್ನು ದಾಕಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಇಲ್ಲಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
