
ಬಾಗಲಕೋಟೆ : ಬಸ್ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಯ ಬ್ಯಾಗ್ನಿಂದ 120 ಗ್ರಾಂ ಚಿನ್ನವನ್ನು ಎಗರಿಸಿದ ಘಟನೆ ಬಾಗಲಕೋಟೆಯ ರಬಕವಿ ಬನಹಟ್ಟಿ ಬಳಿ ನಡೆದಿದೆ. ದಂಪತಿಗಳಿಬ್ಬರು ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕರ ದಟ್ಟಣೆ ಹೆಚ್ಚಿದ್ದ ಕಾರಣ ಕಳ್ಳರು ತಮ್ಮ ಕೈ ಚಳಕ ತೋರಿಸಿ ಬ್ಯಾಗ್ನಲ್ಲಿದ್ದ 120 ಗ್ರಾಂಗೂ ಹೆಚ್ಚಿನ ಚಿನ್ನಾಭರಣವನ್ನು ದೋಚಿರುವ ಘಟನೆ ರಬಕವಿ ಬನಹಟ್ಟಿಯಲ್ಲಿ ನಡೆದಿದೆ. ಕೋಲಾರದಿಂದ ಬನಹಟ್ಟಿಗೆ ಬಸ್ನಲ್ಲಿ ತೆರಳುತ್ತಿದ್ದ ದಂಪತಿಗಳಿಬ್ಬರು ತಮ್ಮ ಬಟ್ಟೆ ತುಂಬಿದ ಬ್ಯಾಗ್ನಲ್ಲಿ 120 ಗ್ರಾಂ ತೂಕದ ಬಂಗಾರವನ್ನು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬಸ್ನಲ್ಲಿ ಹೆಚ್ಚಿನ ಪ್ರಯಾಣಿಕರು ಇದ್ದ ಹಿನ್ನೆಲೆ ಬ್ಯಾಗ್ನ್ನು ಡ್ರೈವರ್ ಕುಳಿತುಕೊಳ್ಳುವ ಸ್ಥಳದಲ್ಲಿ ಇಟ್ಟದ್ದನ್ನು ಗಮನಿಸಿದ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಬ್ಯಾಗ್ ಜಿಪ್ ತೆರೆದು ತಡಕಾಡಿದ್ದಾರೆ, 120 ಗ್ರಾಂ ಚಿನ್ನವನ್ನು ಎಗರಿಸಿದ್ದಾರೆ. ಪ್ರಕರಣ ಕುರಿತು ಬನಹಟ್ಟಿ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.
