
ಬೆಂಗಳೂರು : ಇಂದು ಸಿಎಂ ಡಿಸಿಎಂ ಉಭಯ ಸಭೆ ನಡೆಸಿ, ನಾಳೆ ಸಿಎಂ ಸಿದ್ದರಾಮಯ್ಯ ತಮ್ಮ ತವರು ನಿವಾಸವಾದ ಮೈಸೂರಿಗೆ ಪ್ರವಾಸ ನಡೆಸಲಿದ್ದಾರೆ, ಮತ್ತೊಂದೆಡೆ ಕಾಂಗ್ರೆಸ್ ಸಂಸದೀಯ ಸಮಿತಿ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ರಾಜ್ಯದ ಬೆಳವಣಿಗೆ ಕುರಿತು ಚರ್ಚೆ ಮಾಡುವ ಸಂಭವವಿದೆ, ಮತ್ತು ಸಿಎಂ ಮತ್ತು ಡಿಸಿಎಂ ಸಭೆ ಬಳಿಕ ದೆಹಲಿಗೆ ಹೋಗುವ ಸಾಧ್ಯತೆಗಳಿದ್ದು, ಸದ್ಯ ಸಿದ್ದರಾಮಯ್ಯ ತಮ್ಮ ತವರು ಪ್ರವಾಸ ಹಮ್ಮಿಕೊಂಡಿದ್ದು, ಸಿಎಂ ಪ್ರವಾಸದ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. ಹಾಗಾದರೆ, ಅಧಿಕಾರ ಹಂಚಿಕೆ ವಿಷಯದಲ್ಲಿ ಉಭಯ ನಾಯಕರು ಸಂಧಾನಕ್ಕೆ ಬಂದ್ರಾ!, ವರಿಷ್ಠರು ಹೇಳಿದಂತೆ ನಾಯಕರು ಕೇಳ್ತಾರಾ ? ವರಿಷ್ಠರು ನಾಯಕರನ್ನು ಸೈಲೆಂಟ್ ಮಾಡಿದರಾ? ಎಂಬ ಹಲವಾರು ಪ್ರರ್ಶನೆಗಳು ಉದ್ಭವ ಆಗುತ್ತಿವೆ.
