
ಹಾನಗಲ್ : ಕಾಡುಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ನಾಲ್ವರು ಖದೀಮರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಹಾನಗಲ್ತಾಲ್ಲುಕಿನ ಮಕರವಳ್ಳಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಗುರುವಾರ ಮಧ್ಯರಾತ್ರಿ ವನ್ಯಪ್ರಾಣಿ ಬೇಟೆಯಾಡಲು ಬಂದಿದ್ದ ನಾಲ್ವರು. ಅರಣ್ಯ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದ ವೇಳೆ ನಾಲ್ವರು ನಿಂತಿರುವುದನ್ನು ಗಮನಿಸಿ ವಿಚಾರಿಸಲು ಹೋದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಸಿಬ್ಬಂಧಿಗಳು ನಾಲ್ವರ ಪೈಕಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ವರಲ್ಲಿ ಓರ್ವ ಆಪರೋಪಿ ತಪ್ಪಿಸಿಕೊಂಡಿದ್ದಾನೆ.
ಘಟನೆ ಸಂಬಂಧ ಶಿಕಾರಿಪುರ ನಿವಾಸಿ ಶಫಿಉಲ್ಲಾ, ಅಮೀರ್ ಅಹ್ಮದ್ ಜಾವೆದ್ ಆಫ್ರನ್ ಮೊಹಮ್ಮದ್ ಜಾಫರ್, ಫೈಸಲ್ ಹುಸೇನ್ ಅಬ್ದುಲ್ ವಾಜೀದ್, ಎಂಬುರನ್ನು ಬಂಧಿಸಿದ್ದು ,ತಾರೀಖ್ ಅತಾವುಲ್ಲಾ ಪಾರೂಖ್ ಪರಾರಿಯಾಗಿರುತ್ತಾನೆ. ಬಂಧಿತರಿಂದ ಬಂದೂಕು, ಚಾಕು ಸೇರಿ ಕಾರನ್ನು ವಶಪಡಿಸಿಕೊಂಡಿದ್ದಾರೆ.
