ಮಂಗಳೂರು: ವಯಸ್ಸಾದ ಜೀವ ಎಂಬುದನ್ನು ನೋಡದೆ ಹೆತ್ತ ತಾಯಿಯನ್ನು ನೆಲಕ್ಕೆ ತಳ್ಳಿ ಚಪ್ಪಲಿಯಿಂದ ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆ ಮಂಗಳೂರಿನ ಪಂಚಾಯಿತಿ ಕಚೇರಿ ಬಳಿ ನಡೆದಿದೆ.ಮಗಳ ಮೇಲೆ ದೂರು ನೀಡಲು ಬಂದಿದ್ದ ತಾಯಿಯನ್ನು ತಡೆದು, ಪದೇ ಪದೇ ತನ್ನ ವಿರುದ್ಧ ದೂರು ನೀಡಲು ಪಂಚಾಯಿತಿ ಕಚೇರಿಗೆ ಬರುತ್ತಿರುವ ತಾಯಿಯನ್ನು ವೃದ್ಧೆ ಎಂಬುದನ್ನು ನೋಡದೇ ನೆಲಕ್ಕೆ ತಳ್ಳಿದ ಮಗಳು ಚಪ್ಪಲಿಯಿಂದ ಹಲ್ಲೆ ಮಾಡಿದ್ದಾಳೆ. ತಾಯಿ-ಮಗಳ ಗಲಾಟೆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
