ಕೊಡಗು : ಕೊಡಗಿನಲ್ಲೊಂದು ಮನಕಲಕುಮ ಘಟನೆಯೊಂದು ನಡೆದಿದೆ. ಕಾಫಿ ತೋಟದಲ್ಲಿ ನಾಪತ್ತೆಯಾದ ಮಗು ಮುಂಜಾನೆ ಸಿಕ್ಕಿದೆ. ಕೊಡಗಿನ ವಿರಾಜಪೇಟೆಯ ಕೊಂಗಣ ಗ್ರಾಮದಲ್ಲಿ ನಡೆದಿದೆ. ಶನಿವಾರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಎರಡು ವರ್ಷದ ಸುನನ್ಯ ಎಂಬ ಮಗುವೊಂದು ಕಾಣೆಯಾಗಿದೆ.ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಊಟದ ಸಮಯದಲ್ಲಿ ತಾಯಿ ಮೊಬೈಲ್ ಹಿಡಿದು ಕುಳಿತಿದ್ದು, ಇತ್ತ ಮಗುವನ ಕಡೆ ಗಮನಹರಿಸದ ತಾಯಿ ಮೊಬೈಲ್ನಲ್ಲಿ ಮುಳುಗಿಹೋಗಿದ್ದು, ಸಂಜೆ ವೇಳೆಗೆ ಮಗು ನಾಪತ್ತೆಯಾಗಿದೆ. ಸಂಜೆ ತೋಟವನ್ನೆಲ್ಲ ಹುಡುಕಿದರೂ ಪತ್ತೆಯಾಗದ ಮಗು. ಸ್ಥಳೀಯ ಅರಣ್ಯ ಇಲಾಖಾ ಸಿಬ್ಬಂದಿಗೆ ಮಾಹಿತಿ ತಿಳಿಸದ ಪೋಷಕರು, ತಕ್ಷ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದರು. ಶೋಧ ಕಾರ್ಯಚರಣೆಯಲ್ಲಿ ಮಗುವನ್ನು ಹುಡುಕಿದ ಶ್ವಾನ ಓರಿಯೋ. ಮಗುವನ್ನು ಸುರಕ್ಷಿತವಾಗಿ ತಾಯಿಯ ಮಡಿಲಿಗೆ ಸೇರಿಸಿದ್ದು, ಯಾವುದೇ ರೀತಿ ಹಾನಿಯಾಗಿಲ್ಲ ಎಂದು ತಿಳಿಸಿದರು.
