ಬೆಂಗಳೂರು: ಆತ ಹೆಂಡತಿ ಬಿಟ್ಟಿದ್ದ, ಈಕೆಯ ಪತಿ ತೀರಿಹೋಗಿದ್ದ. ಪತಿ ಸಾವಿನ ಬಳಿಕ ಒಬ್ಬಂಟಿಯಾಗಿದ್ದ ಆಕೆಗೆ ಈತ ಆಸರೆಯಾಗಿದ್ದ. ಆದ್ರೆ ಅನುಮಾನ ಎಂಬ ಭೂತ ಆತನನ್ನ ಕಾಡತೋಡಗಿತ್ತು. ಇದರಿಂದ ಇಬ್ಬರ ಮಧ್ಯೆ ಜಗಳ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಆಕೆಯನ್ನ ವೇಲ್ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ಆತ ಕೂಡ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
ಈ ಘಟನೆ ನಡೆದಿರೋದು ಬೆಂಗಳೂರಿನ ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ಇಂದಿರಾಪ್ರಿಯದರ್ಶಿನಿ ನಗರದಲ್ಲಿ, 49 ವರ್ಷದ ಲಲಿತಾ ಎಂಬ ಮಹಿಳೆ ಕೊಲೆಯಾಗಿದ್ದಾಳೆ. ಲಕ್ಷ್ಮಿನಾರಾಯಣ ಎಂಬಾತ ಲಲಿತಾಳನ್ನ ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ.
ಕೊಲೆಯಾದ ಮಹಿಳೆ ಲಲಿತಾ ತನ್ನ ಗಂಡನ ಬಳಿಕ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಳು, ಇತ್ತ, ಕೊಲೆ ಆರೋಪಿ ಲಕ್ಷ್ಮೀ ನಾರಾಯಣ, ತಾಳಿ ಕಟ್ಟಿದ್ದ ಹೆಂಡತಿಯನ್ನ ಬಿಟ್ಟಿದ್ದ, ಲಲಿತಾ ಹಾಗೂ ಲಕ್ಷ್ಮೀನಾರಾಯಣ ಮಧ್ಯೆ ಪ್ರೇಮಾಂಕುರವಾಗಿದ್ದು, ಇಬ್ಬರು ಇಂದಿರಾಪ್ರಿಯದರ್ಶಿನಿ ನಗರದಲ್ಲಿ ಒಟ್ಟಿಗೆ ಗಂಡ ಹೆಂಡತಿಯಂತೆ ವಾಸವಾಗಿದ್ದರು.
ಮೊದ ಮೊದಲು ಅನೋನ್ಯವಾಗಿದ್ದ ಇಬ್ಬರು ಮಧ್ಯೆ ಅನುಮಾನ ಎಂಬ ಭೂತ ವಕ್ಕರಿಸಿದೆ. ಲಲಿತಾಳ ನಡತೆ ಬಗ್ಗೆ ಪ್ರಶ್ನಿಸಿ ಲಕ್ಷ್ಮೀನಾರಾಯಣ ಪದೇ ಪದೇ ಆಕೆಯ ಜೊತೆ ಜಗಳವಾಡುತ್ತಿದ್ದ, ಆದ್ರೆ, ನಿನ್ನೆ ರಾತ್ರಿ ಇಬ್ಬರ ನಡುವಿನ ಜಗಳ ತಾರಕಕ್ಕೇರಿದ್ದು, ವೇಲ್ ನಲ್ಲಿ ಲಲಿತಾಳ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಬಳಿಕ ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬೆಳಗ್ಗೆ ಮನೆಯ ಬಾಗಿಲು ಓಪನ್ ಆಗಿದ್ದರು, ಯಾವುದೇ ಚಲನವಲನ ಇಲ್ಲದ್ದನ್ನ ಗಮನಿಸಿದ ಸ್ಥಳೀಯರು ಅನುಮಾನದಿಂದನ ಮನೆಯೊಳಗೆ ಹೋಗಿದ್ದಾರೆ. ಆ ವೇಳೆ ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣ ಬೆಳಿಕಿಗೆ ಬಂದಿದೆ. ಸ್ಥಳಕ್ಕೆ ರಾಜಗೋಪಾಲನಗರ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಮೃತದೇಹಗಳನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
