
ಬೆಂಗಳೂರು : ಸತತ 3 ವರ್ಷದಿಂದ ಕಳ್ಳತನ ಮಾಡುತ್ತಿದ್ದ ಖದೀಮ ಮೊಹಮ್ಮದ್ ಇಸ್ರಾರ್, ಕೊನೆಗೂ ಪೊಲೀಸ್ ಬಲೆಗೆ. ಬಟ್ಟೆ ಬದಲಾಯಿಸಿಕೊಂಡು ಕಳ್ಳತನ ಮಾಡುತ್ತಿದ್ದ, ಕೆಲಸ ಮುಗಿದ ನಂತರ ಬಟ್ಟೆ ಮತ್ತು ಬೈಕ್ ನಂಬರ್ ಪ್ಲೇಟ್ ಚೇಂಜ್. 3 ವರ್ಷದಿಂದ ಕಳ್ಳತನ ಮಾಡಿಕೊಂದು ಪೊಲೀಸರಿಗೆ ಸಿಕ್ಕಿಬೀಳದ ಈತ ತಡರಾತ್ರಿ ಮನೆ ಕಳ್ಳತನ ಮಾಡುತ್ತಿದ್ದ ವೇಳೆ ಸಿಕ್ಕಿಹಾಕಿಕೊಂಡಿದ್ದಾನೆ. ಆರೋಪಿಯಿಂದ ಸುಮಾರು 70 ಲಕ್ಷ ಮೌಲ್ಯದ 500ಗ್ರಾಂ ಚಿನ್ನ,1.5ಕೆ.ಜಿ. ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಕೆ.ಆರ್.ಪುರಂ ನಗರದ ಪೊಲೀಸರಿಂದ ಆರೋಪಿಯನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
