ಬಾಗಲಕೋಟೆ : ಎಪಿಎಮ್ ಸಿ ಬಳಿ ಇರುವ ಸಜೀವಿ ಅಂದ ಮಕ್ಕಳ ವಸತಿ ಶಾಲೆಯ ಹಾಸ್ಟೆಲ್ನಲ್ಲಿ ಸಿಲಿಂಡರ್ ಸೋರಿಕೆ. ಸಿಬ್ಬಂದಿಯ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ. ಅಂದ ಮಕ್ಕಳ ವಸತಿ ಶಾಲೆಯೊಂದರಲ್ಲಿ ಸಿಲಿಂಡರ್ ಸೋರಿಕೆ ಕಾರಣ ಸಿಬ್ಬಂದಿ ಎಚ್ಚೆತ್ತುಕೊಂಡು ಮಕ್ಕಳನ್ನು ಹೊರ ಕರೆದುಕೊಂಡು ಹೋಗಿದ್ದಾರೆ. ಬೆಂಕಿ ನಂದಿಸಲು ಸ್ತಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಬಂದು ಬೆಂಕಿ ನಮದಿಸಿದ್ದಾರೆ. ಅಡುಗೆ ಮನೆಯಲ್ಲಿದ್ದ ಇತರೆ ಸಿಲಿಂಡರ್ಗಳು ಸ್ಫೊಟವಾಗುವ ಸಾದ್ಯತೆಯಿದ್ದು, ಸದ್ಯ ಅಡುಗೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಯಾವುದೇ ರೀತಿಯ ಅನಾಹುತ ಸಂಭವಿಸದ ಕಾರಣ ನಿಟ್ಟುಸಿರು ಬಿಟ್ಟಿದ್ದಾರೆ.
