ಸಿದ್ದಾಪುರದಲ್ಲಿ ಆಗಿದ್ದಂತಹ ದರೋಡೆ ಮಾಸುವ ಮುನ್ನವೇ ಮತ್ತೊಬ್ಬ ಸಿಬ್ಬಂದಿಯಿಂದ ಕಳ್ಳತನ ನಡೆದಿದೆ. ಪೊಲೀಸ್ ಆಯುಕ್ತರ ಕಚೇರಿಯ ಬಳಿಯೇ ನಡೆದ ಕಳ್ಳತನ, ಅಯ್ಯೋ ಕಮಿಷನರ್ ಸಾಹೇಬ್ರೇ ಏನಿದು? ನಿಮ್ಮ ಸಿಬ್ಬಂದಿ ಮಾಡಿರುವ ಕೆಲಸವೇನು!
ಸೈಬರ್ ಪ್ರಕರಣದಲ್ಲಿ ಭಅಗಿಯಾಗಿದ್ದ ಆರೋಪಿಯನ್ನು ಅಧಿಕಾರಿಗಳು ಬಂಧಿಸಿದ್ದು, ಸೀಜ್ ಮಾಡಿದ್ದ ಕಾರನ್ನು ಪರಿಶೀಲಿಸಿ, ಆತನ ಕಾರಿನಲ್ಲಿದ್ದ 11 ಲಕ್ಷ ಹಣದ ಬ್ಯಾಗ್ನ್ನು ಎಗರಿಸಿದ ಹೆಡ್ ಕಾನ್ಸ್ಟೇಬಲ್ ಜೆಬಿಉಲ್ಲಾ. ಹಣವನ್ನು ಕಳ್ಳತನ ಮಾಡಿ ತನಗೇನು ಗೊತ್ತೇ ಇಲ್ಲ ಎಂಬ ರೀತಿ ವರ್ತಿಸುತ್ತಿದ್ದ, ಅತ್ತ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ ಇನ್ಸ್ಪೆಚ್ಟರ್ ಉಮೇಶ್ ತಂಡ, ಆದರೆ ಜಾಮೀನು ಪಡೆದುಕೊಂಡು ಹೊರ ಬಂದ ಆರೋಪಿ ತಾನು ಕಳ್ಳತನ ಮಾಡಿದ್ದ ಹಣವನ್ನು ನೋಡಿದಾಗ ನಾಪತ್ತೆಯಾಗಿತ್ತು. ತಕ್ಷಣ ಈ ಬಗ್ಗೆ ಸೈಬರ್ ಪೊಲೀಸ್ರನ್ನು ಪ್ರಶ್ನಿಸಿದಾಗ ಆರೋಪಿಯ ಪ್ರಶ್ನೆಗೆ ಗಾಬರಿಗೊಂಡು ಪರಿಶೀಲನೆ ಮಾಡಿದಾಗ, ಹಣವನ್ನು ಕಾಣ್ಸ್ಟೇಬಲ್ ಜೆಬಿಉಲ್ಲಾ ಕೊಂಡೊಯ್ದಿರುವುದು ಬೆಳಕಿಗೆ ಬಂದಿದೆ.
ತಕ್ಷಣ ಹೆಡ್ಕಾನ್ಸ್ಟೇಬಲ್ ಜೆಬಿಉಲ್ಲಾ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದಂತಹ ಸಂದರ್ಭದಲ್ಲಿ ಸುಮಾರು 11 ಲಕ್ಷ ಹಣ ಕಳ್ಳತನ ಮಾಡಿ ಆರಾಮಾಗಿರುವ ಹೆಡ್ ಕಾನ್ಸ್ಟೇಬಲ್ ಜೆಬಿಉಲ್ಲಾ ಕೃತ್ಯ ಬೆಳಕಿಗೆ ಬಂದಿದೆ. ಘಟನೆ ಕುರಿತು ಸಿಸಿಬಿ, ಡಿಸಿಪಿ ರಾಜಾ ಇಮಾಮ್ ಖಾಸಿಂಗೆ ದೂರು ದಾಖಲಿಸಿದ್ದು, ದೂರಿನ ಮೇರೆಗೆ ಹೆಡ್ ಕಾನ್ಸ್ಟೇಬಲ್ ಮನೆಯನ್ನು ಜಾಲಾಡಿದಾಗ ಮನೆಯ ಬೆಡ್ರೂಮ್ ಕೆಳಗೆ ಲಕ್ಷ-ಲಕ್ಷ ಹಣ ಇರುವು ಮಾಹಿತಿ ಲಭ್ಯವಾಗಿದೆ. ಕೂಡಲೇ ಹಣವನ್ನು ವಶಕ್ಕೆ ಪಡೆದು, ಉಳಿದ ಹಣವನ್ನು ನೀಡುವಂತೆ ಕೇಳಿದಾಗ ವೈಯಕ್ತಿಕವಾಗಿ ಖರ್ಚು ಮಾಡಿದ್ದೇನೆ ಎಂದು ಉತ್ತರಿಸಿದ್ದಾನೆ. ಕೂಡಲೇ ಬಾಕಿ ಹಣವನ್ನು ನೀಡಬೇಕೆಂದು ತಾಕೀತು ಮಾಡಿದ್ದು ಜೆಬಿಉಲ್ಲಾ ಕೆಲಸಕ್ಕೆ ಶಾಕ್ ನೀಡಿದಂತಾಗಿದೆ.
