
ಮಾದನಾಯಕನಹಳ್ಳಿ: ಮಾದನಾಯಕನಹಳ್ಳಿ ಬಳಿಯ ಅಮ್ಮೂಸ್ ರಿಹ್ಯಾಬ್ ಸೆಂಟರ್ಗೆ ಯುವಕ ಮನೀಶ್ನನ್ನು ಸೇರಿಸಿದ್ದ ಕುಟುಂಬಸ್ಥರು. ರಿಹ್ಯಾಬ್ ಸೆಂಟರ್ನಲ್ಲಿ ಕೇರಳ ಮೂಲದ ಯುವಕನನ್ನು ಕೈ-ಕಾಲುಗಳನ್ನು ಕಟ್ಟಿ ಹಾಕಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿರುವ ಆರೋಪ ಕೇಳಿಬರುತ್ತಿದೆ. ಹಿಂಸಿಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಘಟನೆ ಸಂಬಂಧ ಮಾದನಾಯಕಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು, ಮೃತದೇಹವನ್ನು ಮರಣೋತ್ರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಂದ ನಂತರ ಕ್ರಮ ವಹಿಸಿ ತನಿಖೆ ನಡೆಸಲು ಕಾಯುತ್ತಿದ್ದಾರೆ.
