ಬ್ಯಾಡರಾಯನಹಳ್ಳಿ : ಇಬ್ಬರು ಯುವ ಪ್ರೇಮಿಗಳು ಪ್ರೀತಿಸಿ ಮದುವೆ ಆಗಿದ್ದರು, ಮದುವೆಯಾದ ಮೂರು ತಿಂಗಳಿನಲ್ಲಿ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ಯಾಡರನಹಳ್ಳಿಯ ವಿದ್ಯಮಾನ್ ನಗರದಲ್ಲಿ ನಡೆದಿದೆ.
ಅಭಿಷೇಕ್ ಮತ್ತು ಅಮೂಲ್ಯ ಇಬ್ಬರು ಪ್ರೀತಿಸಿ ಮದುವೆಯಾಗಿದ್ದು, ಕೇವಲ ವಿವಾಹವಾಗಿ ಮೂರು ತಿಂಗಳು ಕಳೆದಿದ್ದು ಯುವತಿ ಅಮೂಲ್ಯ ಪತಿಯ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತನ್ನ ಸಾವಿದೆ ನೇರ ಕಾರಣ ಪತಿಯ ಕುಟುಂಬಸ್ಥರೇ ನನ್ನ ಸಾವಿಗೆ ಕಾರಣ ಎಂದು ಯುವತಿ ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಬ್ಯಾಡರಾಯನ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.
