ಜಗಳೂರು : ತಾಲ್ಲೂಕಿನಾದ್ಯಂತ ರಸ್ತೆ ತುಂಬೆಲ್ಲಾ ಹಾಳಾದ ರಸ್ತೆ,ರಸ್ತೆ ತುಂಬೆಲ್ಲಾ ದೊಡ್ಡ-ದೊಡ್ಡ ತಗ್ಗು ಗುಂಡಿಗಳು ತುಂಬಿ ಹೋಗಿವೆ. ಗುಂಡಿಗಳು ಬಿದ್ದ ಪರಿಣಾಮ ದಿನನಿತ್ಯ ಸಂಚರಿಸುವ ವಾಹನ ಸವಾರರು ರೋಸಿಹೋಗುತ್ತಿದ್ದಾರೆ. ಜಗಳೂರು ತಾಲ್ಲೂಕಿನ ಗಡಿಮಾಕುಂಟೆ ಬಿಳಿಚೋಡು ಮುಖ್ಯರಸ್ಥೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಗುಂಡಿ ಬಿದ್ದು ಸಂಪೂರ್ಣ ಹಾಳಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರದಿಂದ ರಸ್ತೆ ಗುಂಡಿ ಮುಚ್ಚಲು 2,00,00,000ರೂ. ಅನುದಾನ ಬಂದಿದ್ದು, ಕೇವಲ ಒಂದು ಟ್ರ್ಯಾಕ್ಟರ್ ಲೊಡು ಮಿಕ್ಸರ್ ಹಾಕಿ ಕೈತೊಳೆದುಕೊಂಡಿದ್ದಾರೆ. ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿತ್ಯ ಸಂಚಾರಿಸುವ ವಾಹನ ಸವಾರರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಶೀಘ್ರವೆ ರಸ್ತೆ ಗುಂಡಿಗಳನ್ನ ಸರಿಪಡಿಸದೇ ಹೋದರೆ ಉಗ್ರ ಹೋರಾಟಕ್ಕಿಳಿಯಲಾಗುವುದು ಎಂದು ಅಧಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತ ಹೊಸಕೆರೆ ಮುಕುಂದ ಎಚ್ಚರಿಕೆ ನೀಡಿದ್ದಾರೆ.
