
ಬೆಂಗಳೂರು : ಇಂದು ಭಾರತಕ್ಕೆ ರಾಜ್ಯ ಸಂಚಾರಕ್ಕೆ ಆಗಮಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಆದರ ದಿಂದ ಸ್ವಾಗತಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ. ಇಂದು ದೆಹಲಿಯ ಹೈದರಾಬಾದ್ ಹೌಸ್ನಲ್ಲಿ 23ನೇ ಭಾರತ- ರಷ್ಯಾ ಶೃಂಗಸಭೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸಭೆಯಲ್ಲಿ ಪ್ರಮುಖ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ.
ಇಂದಿನ ಶೃಂಗಸಭೆಯಲ್ಲಿ ರಕ್ಷಣಾ ಸಹಕಾರವನ್ನು ಬಲಪಡಿಸುವಿಕೆ, ಭಾರತ-ರಷ್ಯಾ ವ್ಯಾಪಾರಗಳ ಬಾಹ್ಯ ಒತ್ತಡಗಳಿಂದ ರಕ್ಷಣೆ ,ಸಣ್ನ ಮಾಡ್ಯುಲರ್ ರಿಯಾಕ್ಟ್ಗಳಲ್ಲಿ ಪರಸ್ಪರ ಸಹಕರಿಸುವ ಕುರಿತು ಚರ್ಚೆ.
ಬಹುಮುಖ್ಯವಾಗಿ ತೈಲ ಖರೀದಿ ಹೆಚ್ಚಿಸುವಿಕೆ, ವ್ಯಾಪಾರ ಕೊರತೆ ನೀಗಿಸುವುದು, S-57 ಫೈಟರ್ ಜೆಟ್ಗಳ ಪೂರೈಕೆ ಸಾಧ್ಯತೆಗಳ ಕುರಿತು ಚರ್ಚೆ. ಶ್ರಮ, ಸಿವಿಲ್ ಅಣ್ವಿಕ ಶಕ್ತಿ, ವ್ಯಾಪಾರ, ಆರೋಗ್ಯ, ಜಲಾಂತರ್ಗಾಮಿ ಸಹಕಾರದಲ್ಲಿ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುವ ಕುರಿತು ಚರ್ಚೆ.
ರಷ್ಯಾ ಅಧ್ಯಕ್ಷ ಪುಟಿನ್ ರಾಷ್ಟ್ರಪತಿ ಭವನದಲ್ಲಿ ಗೌರವಾನ್ವಿತ ವಾಗಿ ಸ್ವಾತಿಸಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಬರಮಾಡಿಕೊಂಡರು. ರಾಷ್ಟ್ರಪತಿ ಭವನದಲ್ಲಿ ಸ್ವಾಗತ ಪಡೆದು, ರಾಜಾಘಾಟ್ನಲ್ಲಿ ಮಹಾತ್ಮ ಗಾಂಧಿಯನ್ನು ಗೌರವಿಸಿದರು, ಪ್ರಧಾನಿ ನರೇಂದ್ರ ಮೋದಿಯವರು ಶ್ರೇಷ್ಠ ಭಗವದ್ಗೀತೆಯನ್ನು ರಷ್ಯನ್ ಭಾಷೆಯಲ್ಲಿ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದರು.
