
ಚಿತ್ರದುರ್ಗ : 13 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಜನ್ಮ ಕೊಟ್ಟ ತಂದೆಯಿಂದಲೇ ಅತ್ಯಾಚಾರ, ಅತ್ಯಾಚಾರ ಎಸಗಲು ಹೆತ್ತತಾಯಿಯೇ ಸಾಥ್ ನೀಡಿರುವ ಘಟನೆ ಚಿತ್ರದುರ್ಗದ ಗ್ರಾಮದಲ್ಲಿ ನಡೆದಿದೆ.
13 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸ್ವಂತ ತಂದೆಯೇ ಅತ್ಯಾಚಾರವೆಸಗಿದ್ದಾನೆ. ಇದಕ್ಕೆ ಹೆತ್ತ ತಾಯಿಯೇ ತನ್ನ ಗಂಡನಿಗೆ ಪ್ರೋತ್ಸಾಹಿಸಿದ್ಧಾಳೆ. ಮೈನೆರೆದು ಮೂರು ತಿಂಗಳು ಕಳೆದಿದ್ದು, ಹುಟ್ಟಿದ ಹಬ್ಬ ಎಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮಗಳ ಮೇಲೆ ಅತ್ಯಾಚಾರ ಎಸಗಿರುವ ಆರೋಪಿ ಮಂಜುನಾಥ್. ಗ್ರಾಮಸ್ಥರು ದಂಪತಿಗಳ ವಿರುದ್ಧ ಆಕ್ರೋಶಗೊಂಡು ಚಿತ್ರದುರ್ಗದ ಠಾಣೆಗೆ ದೂರು ದಾಕಲಿಸಿದ್ದು, ಪೊಲೀಸರು ಇಬ್ಬರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ಬಂಧಿಸಿದ್ದಾರೆ. CWC ಇಲಾಖೆಯಿಂದ ಬಾಲಕಿಯನ್ನು ರಕ್ಷಸಿದ್ದು, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
